ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬಿಜೆಪಿ ಹಾಗೂ ಜೆಡಿಎಸ್​ ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯಕ್ಕೆ ಹೊರಟಿದ್ದಾರೆ -ವ್ಯಂಗ್ಯವಾಡಿದ  ಡಿಸಿಎಂ ಡಿಕೆ ಶಿವಕುಮಾರ್

 ಬೆಂಗಳೂರು:  ಬಿಜೆಪಿ ಹಾಗೂ ಜೆಡಿಎಸ್ ಬರ ಅಧ್ಯಯನ ನಡೆಸುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ , ಬಿಜೆಪಿ ಹಾಗೂ ಜೆಡಿಎಸ್​ ನವರಿಗೆ ಜನರ ಮೇಲೆ ಬಹಳ ಅನುಕಂಪ ಬಂದು ಬರ ಅಧ್ಯಯಕ್ಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಈಗಾಗಲೇ ರಾಜ್ಯ ಸರ್ಕಾರ ಬರ ಅಧ್ಯಯನ  ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದೆ. ಕೇಂದ್ರ ವರದಿಯನ್ನು ಸ್ವೀಕರಿಸಿ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ಆದರೆ ಈಗ ಬಿಜೆಪಿ ಜೆಡಿಎಸ್ ನಾಯಕರು ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ. ಮೊಲು ಬಿಜೆಪಿ, ಜೆಡಿಎಸ್ ಶಾಸಕರು ಕೇಂದ್ರದಿಂದ ಅನುದಾನ ಕೊಡಿಸುವ ಕೆಲಸ ಮಾಡಲಿ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪರಿಹಾರ ಕೊಡಿಸುವ ಕೆಲಸ ಮಾಡಲಿ.  ಅದು ಬಿಟ್ಟು ಪ್ರಚಾರಕ್ಕಾಗಿ ಎರಡು ಗಿಡಗಳನ್ನು ನೋಡುವುದಲ್ಲ ಎಂದರು.

ಕೇಂದ್ರ ಸರ್ಕಾರದ ಬಳಿ ನಾವೇನು ಭಿಕ್ಷೆ ಕೇಳುತ್ತಿಲ್ಲ. ಕೇಂದ್ರದಿಂದ ಬರಬೇಕಿರುವ ಹಣ ಕೊಡಿಸಲಿ.  ನಮ್ಮ ಪಾಲಿನ ಹಣ ಕೇಳುತ್ತಿದ್ದೇವೆ. ಕರ್ನಾಟಕಕ್ಕೆ ಕೇಂದ್ರ ಕೊಡಬೇಕಾದ ಅನುದಾನ ಕೊಡಲಿ ಅಷ್ಟೇ ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದರು.

Related posts

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹುಟ್ಟುಹಬ್ಬ: ಬೆಡ್‍ಶೀಟ್ ಮತ್ತು ಹಣ್ಣು ವಿತರಣೆ.

100ಕ್ಕೂ ಹೆಚ್ಚು ತಾಲ್ಲೂಕುಗಳನ್ನ ಬರಪೀಡಿತ ಎಂದು ಘೋಷಣೆ- ಕೃಷಿ ಸಚಿವ ಚಲುವರಾಯಸ್ವಾಮಿ.

ಬದಲಾವಣೆಗೆ ಗಡುವು ಮುಗಿದ್ರೂ 2000 ರೂ. ನೋಟು ನಿಮ್ಮಲ್ಲಿದೆಯೇ..? ಹಾಗಾದ್ರೆ ಹೀಗೆ ಮಾಡಿ…