ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸತ್ಸಂಗಗಳೂ ಧರ್ಮ ಗ್ರಂಥಗಳ ಅಧ್ಯಯನವೂ ಇಂದಿನ ಜಂಜಡದ ಬದುಕಿನಲ್ಲಿ ಒತ್ತಡವನ್ನು ಹತ್ತಿಕ್ಕಲು ಅತ್ಯುತ್ತಮ ಮಾರ್ಗ-ವೀರೇಶಾನಂದ ಸರಸ್ವತಿ ಸ್ವಾಮೀಜಿ

ಶಿವಮೊಗ್ಗ:  ರಾಮಕೃಷ್ಣ ವಿವೇಕಾನಂದ ಆಶ್ರಮದ, ತುಮಕೂರು ಶಾಖೆಯ ಅಧ್ಯಕ್ಷ  ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು, ಸತ್ಸಂಗಗಳೂ ಧರ್ಮ ಗ್ರಂಥಗಳ ಅಧ್ಯಯನವೂ ಇಂದಿನ ಜಂಜಡದ ಬದುಕಿನಲ್ಲಿ ಒತ್ತಡವನ್ನು ಹತ್ತಿಕ್ಕಲು ಅತ್ಯುತ್ತಮ ಮಾರ್ಗಗಳೆಂದು ವಿವರಿಸಿದರು .ಪೂಜ್ಯರು ನಿನ್ನೆ IMA ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಾ ಹೋರಾಟವಿಲ್ಲದ ಬದುಕು ಕೆಚ್ಚಿನ ಕಿಚ್ಚು ಹಚ್ಚಲಾರದು; ಆರಾಮ ವಲಯದಿಂದ ಹೊರಬಂದು ಸೃಜನಶೀಲತೆಯನ್ನೂ ಸ್ವಾಭಾವಿಕತೆಯನ್ನೂ ಮೈಗೂಡಿಸಿಕೊಳ್ಳಲು ಕರೆ ನೀಡಿದರು.ಧೃತಿಗೆಡದೆ ಮುನ್ನುಗ್ಗಲು ಸಮಾಜದಲ್ಲಿ ಯಾವುದೇ ಕಾರ್ಯಕ್ಕೂ ಮೊದಲು ಅಪಹಾಸ್ಯ ಕೊಂಕು, ಆನಂತರ ವಿರೋಧ, ಕಟ್ಟೆ ಕಡೆಯಲ್ಲಿಯೇ ಸ್ವೀಕಾರವನ್ನು ನಾವು ನಿರೀಕ್ಷಿಸಬೇಕಾಗುತ್ತದೆ ಎಂದರು.
ಕಿಕ್ಕಿರಿದು ನೆರೆದಿದ್ದ ಸಭಾಂಗಣದಲ್ಲಿ ,ತಮಗೆ ನೀಡಿದ ಗೌರವಾರ್ಪಣೆ ಸ್ವೀಕರಿಸಿದ ಪೂಜ್ಯರು, ಹಿರಿಯ ತಲೆಮಾರಿನ ವೈದ್ಯರನ್ನು ಕಂಡು ಹರ್ಷ ವ್ಯಕ್ತಪಡಿಸುತ್ತಾ, ಇದೇ ಸನಾತನ ಧರ್ಮದ ದ್ಯೋ
ತಕವೆಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ ನೂತನ ಐಎಂಎ ಅಧ್ಯಕ್ಷ ಡಾ. ಸಿ ರಮೇಶ್ ಸ್ವಾಗತ ಕೋರಿದರು. ಉಪಾಧ್ಯಕ್ಷರಾದ ಡಾ. ಕೆ. ಆರ್. ರವೀಶ್ ರವರು I.M.A. ನಡೆದು ಬಂದ ಹಾದಿಯನ್ನು ಪ್ರಸ್ತುತಪಡಿಸಿದರು. ವೇದಿಕೆಯ ಮೇಲೆ ಪೂರ್ವಾಧ್ಯಕ್ಷ ಡಾ. ಅರುಣ್ ,ಹಾಲಿ ಕಾರ್ಯದರ್ಶಿ ಡಾ. ಅರವಿಂದ್, ಖಜಾಂಚಿ ಡಾ. ಶಶಿಧರ್ ಉಪಸ್ಥಿತರಿದ್ದರು. ಡಾ. ಅರವಿಂದ್ ವಂದನಾರ್ಪಣೆ ಮಾಡಿದರು. ಸಮಾರಂಭದ ನಿರ್ವಹಣೆಯನ್ನು ಡಾ. ವಿನಯ ಶ್ರೀನಿವಾಸ್ ಮತ್ತು ಡಾ. ಹಂಸವೇಣಿ ವಹಿಸಿದ್ದರು .

Related posts

ಐತಿಹಾಸಿಕ ಬೆಂಗಳೂರು ಕಂಬಳಕ್ಕೆ  ಅಶ್ವಿನಿ ಪುನಿತ್​ ರಾಜ್ ​​ಕುಮಾರ್ ಅವರಿಂದ ಅಧಿಕೃತ ಚಾಲನೆ 

ಮೂರು ಸ್ಪರ್ಧೆಗಳಲ್ಲಿ ಕೊಣಂದೂರು ರೋಟರಿ ಕ್ಲಬ್ ಪ್ರಥಮ.

ಬಹುತ್ವದ ಭಾರತಕ್ಕೆ ಸಾರ್ವಜನಿಕ ಶಿಕ್ಷಣ ಶೋಭೆ-ಡಿ.ಮಂಜುನಾಥ