ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನನ್ನನ್ನು ಪಕ್ಷದಿಂದ ಓಡಿಸಲು ರೆಡಿಯಾಗಿದ್ದಾರೆ- ಸ್ವಪಕ್ಷ ಬಿಜೆಪಿ ವಿರುದ್ಧವೇ ತಿರುಗಿಬಿದ್ದ ಶಾಸಕ ಎಸ್.ಟಿ ಸೋಮಶೇಖರ್.

ಮೈಸೂರು:  ಸ್ವಪಕ್ಷ ಬಿಜೆಪಿ ವಿರುದ್ಧವೇ ಶಾಸಕ ಎಸ್.ಟಿ ಸೋಮಶೇಖರ್ ಅಸಮಾಧಾನ ಹೊರ ಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್,  ನಾನು ಕಾಂಗ್ರೆಸ್ ನಲ್ಲಿದ್ದೆ.  ಅವರಾಗಿಯೇ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡರು.  ಈಗ ಎಸ್ ಟಿಎಸ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ ನನ್ನನ್ನ ಪಕ್ಷದಿಂಧ ಬಿಡಿಸಲು ರೆಡಿಯಾಗಿದ್ದಾರೆ. ನನ್ನನ್ನು ಪಕ್ಷದಿಂದ ಓಡಿಸಲು ರೆಡಿಯಾಗಿದ್ದಾರೆ ಎಂದು ಆರೋಪಿಸಿದರು.

ನನ್ನ ಕ್ಷೇತ್ರ ಅಭಿವೃದ್ಧಿಗೆ ಸಿಎಂ ಡಿಸಿಎಂ ಬಳಿ ಹೋಗ್ತೇನೆ. ತಪ್ಪೇನು..?   ಗ್ಯಾರಂಟಿ ಯೋಜನೆಗಳಿಗೆ ಏಕೆ ಉತ್ತೇಜನ ನೀಡುತ್ತೀರಿ ಎನ್ನುತ್ತಾರೆ. ಹಾಗಾದರೇ ನನ್ನ ಕ್ಷೇತ್ರದ ಜನರಿಗೆ ಒಳ್ಳೆಯದು ಮಾಡೋದು ಬೇಡವಾ..? ರಾಜ್ಯದಲ್ಲಿ ಸರ್ಕಾರ ಯಾವುದಾದರೂ ಇರಲಿ ಜನರಿಗೆ ಒಳ್ಳೆಯದು ಮಾಡುವುದು ಬೇಡವೇ..? ಎಂದು ಕಿಡಿಕಾರಿದರು.

ಬಿಜೆಪಿ ಬರ ಅಧ್ಯಯನಕ್ಕೆ ಎಸ್.ಟಿ ಸೋಮಶೇಖರ್ ವಿರೋಧ.

ಬಿಜೆಪು ಬರ ಅಧ್ಯಯನಕ್ಕೆ ವಿರೋಧ ವ್ಯಕ್ತಡಿಸಿರುವ ಶಾಸಕ ಎಸ್.ಟಿ ಸೋಮಶೇಖರ್,  ರಾಜ್ಯ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡಲಿ. ಅದನ್ನ ಬಿಟ್ಟು ಇಲ್ಲಿ ಪ್ರಮಾಸ ಮಾಡಿದರೇ ಏನು ಪ್ರಯೋಜನ. ನಿಮ್ಮ ಬರ ಅಧ್ಯಯನ ಪ್ರವಾಸದಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಾಗ್ದಾಳಿ ನಡೆಸಿದರು.

Related posts

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ – ಸಿಎಂ ಸಿದ್ದರಾಮಯ್ಯ 

ಜಾತಿ ಜನಗಣತಿ ವರದಿ ಮೂಲಪ್ರತಿಯೇ ಕಾಣೆ : ರಾಜ್ಯ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ.

ಕೆಳ ಹಾಗೂ ಶೋಷಿತ ಸಮುದಾಯಗಳಿಗಾಗಿ ಕಾಂತರಾಜ್ ವರದಿ ಜಾರಿಗೆ ಬರಬೇಕಾಗಿದೆ-ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್