ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಸರ್ಕಾರದ ನಿರ್ಧಾರ: ಈ ವರ್ಷ ‘ಶಿಕ್ಷಕ ವರ್ಗಾವಣೆ’ ಇಲ್ಲ:

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು ಈ ವರ್ಷ ವರ್ಗಾವಣೆ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಈ ವರ್ಷ 25,000 ಶಿಕ್ಷಕರ ವರ್ಗಾವಣೆಯನ್ನು ಮಾಡಲಾಗಿತ್ತು. ಆದರೇ 2023-24ನೇ ಸಾಲಿಗೆ ಕಡ್ಡಾಯ ವರ್ಗಾವಣೆಯನ್ನು  ನಡೆಸದಿರಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

ಈ ವರ್ಷ ಯಾವುದೇ ಅಡೆತಡೆ ಇಲ್ಲದೇ ಶಿಕ್ಷಕರ ವರ್ಗಾವಣೆಯಾಗಿತ್ತು. 2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ನಾಲ್ಕು ತಿಂಗಳ ಹಿಂದಷ್ಟೇ ಮುಕ್ತಾಯಗೊಂಡಿತ್ತು. ಇದರ ನಂತ್ರ 13,351 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಮುಗಿಯೋ ವರೆಗೆ ವರ್ಗಾವಣೆ ಮಾಡದೇ ಇರೋ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿಯೋ ವೇಳೆಗೆ ಪರೀಕ್ಷಾ ಹಂತ ಬಂದು ನಿಲ್ಲಲಿದೆ. ಈ ವೇಳೆಯಲ್ಲಿ ವರ್ಗಾವಣೆ ಮಾಡೋದು ಸರಿಯಲ್ಲ ಅಂತ ನಿರ್ಧಾರ ಕೈಗೊಂಡಿರುವಂತ ರಾಜ್ಯ ಸರ್ಕಾರ ಈ ವರ್ಷ ಶಿಕ್ಷಕರ ವರ್ಗಾವಣೆಗೆ ಬ್ರೇಕ್ ಹಾಕೋ ಸಾಧ್ಯತೆ ಇದೆ.

ಇದರಿಂದಾಗಿ ಹತ್ತಾರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ, ಬೇರೆಡೆಗೆ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್ ನೀಡಲಾಗಿದೆ.

ರಾಜ್ಯ ಸರ್ಕಾರದ ವರ್ಗಾವಣೆ ನಿಯಮಗಳ ಪ್ರಕಾರ ಪ್ರತಿ ವರ್ಷ ಶಿಕ್ಷಕರ ವರ್ಗಾವಣೆ ನಡೆಸಬೇಕು. ಆದರೆ ವಿವಿಧ ಕಾರಣಗಳಿಂದ ಕೆಲ ವರ್ಷಗಳಿಂದ ಎರಡು ವರ್ಷಗಳಿಗೆ ಒಮ್ಮೆ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

 

Related posts

ರೋಟರಿ ಸೆಂಟ್ರಲ್‌ನಿಂದ ಉಚಿತ ಲ್ಯಾಪ್‌ಟಾಪ್ ವಿತರಣೆ-ಶಿವರಾಜ್ 

ನಾನು ಎಲ್ಲರ ಸ್ಪೀಕರ್:  ರಾಜಕೀಯ, ಜಾತಿ ಧರ್ಮದಿಂದ ಆ ಸ್ಥಾನವನ್ನ ನೋಡಬಾರದು -ಯು.ಟಿ ಖಾದರ್.

ಸಿಬಿಎಸ್ ಇ 10 ಮತ್ತು 12 ನೇ ತರಗತಿ ವಾರ್ಷಿಕ ಬೋರ್ಡ್ ಪರೀಕ್ಷೆಗಳಿಗೆ ದಿನಾಂಕ ಪ್ರಕಟ