ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ನವೆಂಬರ್ 7ರವರೆಗೂ ಪಡಿತರ ವಿತರಣೆ ಬಂದ್.

ಬೆಂಗಳೂರು: ಪಡಿತರ ವಿತರಣೆಯಲ್ಲಿ ಕಮಿಷನ್  ನೀಡುವಂತೆ ಆಗ್ರಹಿಸಿ ಪಡಿತರ ವಿತರಕರು ನವೆಂಬರ್ 7 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಅಲ್ಲಿವರೆಗೂ ನ್ಯಾಯಬೆಲೆ ಅಂಗಡಿಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರವರೆಗೆ ಪಡಿತರ ವಿತರಣೆ  ಮಾಡದಿರಲು ನ್ಯಾಯಬೆಲೆ ಪಡಿತರ ವಿತರಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ನವೆಂಬರ್ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನ್ಯಾಯಬೆಲೆ ಅಂಗಡಿಕಾರರುತೀರ್ಮಾನಿಸಿದ್ದಾರೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ ನಡೆಸುವವರ ಪ್ರಮುಖ ಬೇಡಿಕೆಯಾಗಿದೆ.

ಇ-ಕೆವೈಸಿ ಕೆಲಸ ನಿರ್ವಹಿಸಲು ಸರ್ಕಾರವು 23.75 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಗೆ ನೀಡುತ್ತಿವೆಯೋ ಹಾಗೆಯೇ ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಕಮಿಷನ್ ಹಣವನ್ನು ನೀಡಬೇಕು. ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು 250 ರೂಪಾಯಿ ಕಮಿಷನ್ ನೀಡಬೇಕು. ಅಂಗಡಿ ನಿರ್ವಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಪಡಿತರ ವಿತರಕರ ಸಂಘ ಆಗ್ರಹಿಸಿದೆ.

ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು. 5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು. DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು ಎಂದು ಬೇಡಿಕೆಗಳನ್ನಿಟ್ಟಿದೆ.

ರಾಜ್ಯದಲ್ಲಿ 4.30 ಕೋಟಿ ಫಲಾನುಭವಿಗಳು ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದಾರೆ. ವರದಿಗಳ ಪ್ರಕಾರ, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರಕ್ಕೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಪ್ರತಿ ಫಲಾನುಭವಿಗೆ 10 ಕೆಜಿ ನೀಡುವಷ್ಟು ಅಕ್ಕಿ ಸರ್ಕಾರಕ್ಕೆ ಸಿಗಲಿಲ್ಲ. ನೇರ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ 170 ರೂ.ಗಳನ್ನು ಸರ್ಕಾರ ನೀಡುತ್ತಿದೆ.

ಒಬ್ಬ ಫಲಾನುಭವಿಗೆ 1 ಕೆಜಿ ಅಕ್ಕಿಯನ್ನು ವಿತರಿಸಲು ಪಡಿತರ ವಿತರಕರು 1.24 ರೂ. ಕಮಿಷನ್ ಪಡೆಯುತ್ತಾರೆ. ಸರ್ಕಾರವು ಅಕ್ಕಿಯ ಬದಲು ಫಲಾನುಭವಿಗಳಿಗೆ ಹಣವನ್ನು ನೀಡಿದರೆ ಪಡಿತರ ವಿತರಕರು ಈ ಕಮಿಷನ್ ಪಡೆಯುವುದಿಲ್ಲ. ಡಿಬಿಟಿ ಮೂಲಕ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲು ಸರ್ಕಾರಕ್ಕೆ 733 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ಜನರಿಗೆ ಅಕ್ಕಿ ನೀಡಿದರೆ, ಪಡಿತರ ವಿತರಕರಿಗೆ ತಿಂಗಳಿಗೆ 856 ಕೋಟಿ ರೂ. ಕಮಿಷನ್ ಹಣ ನೀಡಬೇಕು.

 

Related posts

ಪರೀಕ್ಷೆ ಬರೆಯುವಾಗಲೇ ಹೃದಯಾಘಾತ: 9ನೇ ತರಗತಿ ವಿದ್ಯಾರ್ಥಿ ಸಾವು.

ಮಹಿಳಾ ಮೀಸಲಾತಿ ಮಸೂದೆ ಸ್ವಾಗತ: ಸಿಹಿ ಹಂಚಿ ಸಂಭ್ರಮ..

ನೇತ್ರದಾನ ಜಾಗೃತಿ ಪಾಕ್ಷಿಕ ಮಾಸಾಚರಣೆ: ಜಾಗೃತ ಜಾಥಾ..