ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದುರ್ಗಿಗುಡಿ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ.

ಶಿವಮೊಗ್ಗ: ದುರ್ಗಿಗುಡಿ ಕನ್ನಡ ಸಂಘದಿಂದ ಇಂದು ದುರ್ಗಿಗುಡಿಯ ಕಲ್ಲಿನ ರಥದ ಬಳಿ ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್. ಕೃಷ್ಣಮೂರ್ತಿ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೇಡ. ಮಾತೃಭಾಷೆಯೇ ಶ್ರೇಷ್ಠ ಎಂದು ಜಗತ್ತಿನ ಎಲ್ಲಾ ವಿದ್ವಾಂಸರು ಹೇಳಿದ್ದಾರೆ. ಎಷ್ಟು ಭಾಷೆಯನ್ನು ಬೇಕಾದರೂ ಕಲಿಯಿರಿ. ಆದರೆ ಕನ್ನಡವನ್ನು ಮಾತ್ರ ಮರೆಯಬೇಡಿ. ದುರ್ಗಿಗುಡಿ ಕನ್ನಡ ಸಂಘವು ಹಲವು ವರ್ಷಗಳಿಂದ ಕನ್ನಡದ ಬಗ್ಗೆ ಕಾಳಜಿ ವಹಿಸಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಭಾಷೆ ಬೆಳೆಯಲು, ಉಳಿಯಲು ಶ್ರಮಿಸುತ್ತಿದೆ. ಕನ್ನಡ ಭಾಷೆ ಕರಗಲು ಬಿಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಯೂರ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಜಿ. ಪದ್ಮನಾಭ್, ಕಾರ್ಯದರ್ಶಿ ಸ.ನಾ. ಮೂರ್ತಿ, ಪದಾಧಿಕಾರಿಗಳಾದ ಕಿರಣ್, ನರಸಿಂಹ, ಮನೋಜ್, ಜಿ. ಚಂದ್ರಶೇಖರ್, ಸತೀಶ್ ನಾಯಕ್, ಗುರುಮೂರ್ತಿ, ಟಿ.ವಿ. ರಾಘವೇಂದ್ರ, ಎಸ್.ಸಿ. ಸುಧೀರ್, ಭರತೇಶ್, ಹರೀಶ್, ಶ್ರೀನಿವಾಸ, ಮಧುಸೂದನ್, ಮೋಹನ್, ಮಾಜಿ ಅಧ್ಯಕ್ಷರಾದ ವಿ.ರಾಜು, ಕೃಷ್ಣಯ್ಯ, ಲಿಂಗರಾಜು, ವೆಂಕಟೇಶ್ ಸೇರಿದಂತೆ ಹಲವರಿದ್ದರು.

Related posts

ಅನೀಮಿಯ ಮುಕ್ತ ಶಿವಮೊಗ್ಗ ನಿರ್ಮಾಣಕ್ಕೆ ಕ್ರಮ : ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ.

ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಶಿವಮೊಗ್ಗದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ.

ಅಲರಾಂ ಅಂತಾ ದಿಂಬಿನ ಕೆಳೆಗೆ ಮೊಬೈಲ್ ಇಡೋದು ತುಂಬಾ ಡೇಂಜರ್..