ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಕೆಳ ಹಾಗೂ ಶೋಷಿತ ಸಮುದಾಯಗಳಿಗಾಗಿ ಕಾಂತರಾಜ್ ವರದಿ ಜಾರಿಗೆ ಬರಬೇಕಾಗಿದೆ-ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

ಶಿವಮೊಗ್ಗ: ಕೆಳ ಹಾಗೂ ಶೋಷಿತ ಸಮುದಾಯಗಳ ಬಾಳು ಬೆಳಕಾಗಲು ಸರ್ಕಾರದ ಸೌಲತ್ತುಗಳು ಸಮಾನವಾಗಿ ಸಿಗಲು ಕಾಂತರಾಜ್ ವರದಿ ಜಾರಿಗೆ ಬರಬೇಕಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದರೂ ಕೂಡ ಅದರ ಆಶಯಗಳು ಮಾತ್ರ ಇನ್ನೂ ಈಡೇರಿಲ್ಲ. ಕೆಲವೇ ಕೆಲವು ಸಮುದಾಯಗಳು ಮಾತ್ರ ಸರ್ಕಾರದ ಬಹುಪಾಲು ಹಣವನ್ನು ಕಬಳಿಸುತ್ತಿವೆ. ಹಿಂದುಳಿದ ವರ್ಗಗಳು ಮಾತ್ರ ಹಿಂದೆಯೇ ಉಳಿದಿವೆ. ಸಮಾನ ಅವಕಾಶ ಸಿಗುತ್ತಿಲ್ಲ. ಸುಮಾರು ಹಾಗಾಗಿ ಸರ್ಕಾರದ ಸೌಲತ್ತುಗಳನ್ನು ಶ್ರಮಜೀವಿಗಳು ಪಡೆಯಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯಾದ ಕಾಂತರಾಜ್ ವರದಿ ಜಾರಿಗೆ ಬರಬೇಕಾಗಿದೆ ಎಂದು ಆಗ್ರಹಿಸಿದರು.
ಸಂವಿಧಾನದ ಆಶಯವೇ ಎಲ್ಲರಿಗೂ ಸಮಬಾಳು, ಸಮಪಾಲು ಆಗಿದೆ. ಆದರೆ ಹಿಂದುಳಿದ ವರ್ಗಗಳಲ್ಲಿಯೂ ಮುಂದುವರಿದಿರುವ ಕೆಲವರು ಮಾತ್ರ ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ಮುಂದುವರಿದ ಜಾರಿಗಳ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಒಂದು ಚಿಂತನ ಸಭೆ ನಡೆಸಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಯೋಚಿಸಿದೆ.ಹಾಗಾಗಿ ಮುಂದುವರಿದ ಜಾತಿಗಳು ಕೂಡ ಇದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ ಕೊಟ್ಟಾಗ ಇವರ್ಯಾರು ಮಾತನಾಡಲಿಲ್ಲ ಎಂದರು.
ಹಾಗಾಗಿ ಸರ್ಕಾರ ಏನೇ ಇರಲಿ ಯಾವುದೇ ಪ್ರಬಲ ಜಾತಿಗಳ ಸಚಿವರುಗಳೇ ಇರಲಿ, ಶಾಸಕರೇ ಇರಲಿ, ಅವುಗಳನ್ನೆಲ್ಲ ಬದಿಗಿಟ್ಟು ಅದರ ಸಾಧಕ ಬಾಧಕ ನೋಡಿ ವರದಿಯನ್ನು ಜಾರಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಂತರಾಜ್ ವರದಿ ಜಾರಿಗಾಗಿ ಒಂದು ಜಾಗೃತಿ ಕಾರ್ಯಕ್ರಮವನ್ನು ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನನಾಗೃತಿ ವೇದಿಕೆ ಆಯೋಜಿಸಿದೆ. ಮೀಸಲಾತಿ, ಜನಗಣತಿ ಹಾಗೂ ಜಾತಿ ಗಣತಿಯ ಅವಶ್ಯಕತೆಯಿದೆ. ಈ ಬಗ್ಗೆ ಅರಿವು ಮೂಡಿಸಲು ನಾವು ರಾಜ್ಯಾದ್ಯಂತ ಜಾಗೃತಿ ಸಭೆ ನಡೆಸುತ್ತಿದ್ದೇವೆ. ಇದು ಸರ್ಕಾರದ ವಿರುದ್ಧ ಅಲ್ಲ. ಪಕ್ಷಾತೀತವಾದುದು. ಅಲ್ಲದೆ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೂಡ ಈ ನಿರ್ಧಾರ ಕೈಗೊಂಡಿದೆ ಎಂದರು.
ಬೀಡಿ ಕಟ್ಟುವವರಿಂದ ಹಿಡಿದು ಬೀಡಿ ಸೇದುವವರು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಜಾನೆಯನ್ನ ತುಂಬಿಸುತ್ತಿದ್ದಾರೆ. ಆದರೆ ಈ ಖಜಾನೆ ಹಣ ಮಾತ್ರ ಕೆಲವೇ ಜಾತಿ, ವರ್ಗದವರ ಕೈಸೇರುತ್ತಿದೆ. ಎಲ್ಲಾ ಶ್ರಮಿಕರಿಗೂ, ಶೋಷಿತರಿಗೂ, ಹಿಂದುಳಿದವರಿಗೂ ಸಹ ರಾಜ್ಯ ಮತ್ತು ಕೇಂದ್ರದ ಖಜಾನೆ ಹಣ ತಲುಪಬೇಕು. ಹೀಗೆ ತಲುಪಬೇಕು ಎಂದರೆ ಜನಗಣತಿ ಮತ್ತು ಜಾತಿ ಗಣತಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಕಾಂತರಾಜ್ ವರದಿ ಜಾರಿಗೆ ಬರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಯುವ ಮುಖಂಡ ಹಾಗೂ ಚಿಂತನ-ಮಂಥನ ಕಾರ್ಯಕ್ರಮದ ಸಂಚಾಲಕ ಆರ್. ಮೋಹನ್, ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಪಿ.ಒ. ಶಿವಕುಮಾರ್, ಬಲಿಜ ಸಮಾಜದ ಮುಖಂಡ ಪದ್ಮನಾಭ್, ಶಿವಾನಂದ್, ಜಗನ್ನಾಥ್ ಇದ್ದರು.

Related posts

ಮೈಸೂರಿನ ಕೆಆರ್‌ ನಗರದಲ್ಲಿ ಎರಡು ಅಪರಿಚಿತ ಶವ ಪತ್ತೆ

TOD News

ಔಷಧಗಳ ಜಾಗತಿಕ ಸ್ಪರ್ಧೆಗೆ ಪೇಟೆಂಟ್ ಅತ್ಯಗತ್ಯ-ಕೆ.ಎಲ್.ಶಿವಕುಮಾರ್

ನಟ ಉಪೇಂದ್ರ ವಿರುದ್ಧದ ಎಫ್ ಐಆರ್ ಗೆ ತಡೆ ನೀಡಿದ ಹೈಕೋರ್ಟ್.