ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ದೀಪಾವಳಿಗೆ ಶಿವಮೊಗ್ಗದಲ್ಲಿ ಅಂಟಿಗೆ ಕಲಾ ಪ್ರದರ್ಶನ.

ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ತು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಸಹಯೋಗದಲ್ಲಿ ನವೆಂಬರ್ 21 ರ ಭಾನುವಾರ ಸಂಜೆ ದೀಪಾವಳಿ ಪ್ರಯುಕ್ತ ಮಲೆನಾಡಿನ ವಿಶಿಷ್ಟ ಜನಪದ ಕಲೆ ಅಂಟಿಗೆ ಪಂಟಿಗೆ ಕಲಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ನಡೆದ ಕಸಾಪ, ಕಸಾಸಾಂ ವೇದಿಕೆ, ಕಜಾಪ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಮಾಲೋಚನೆ ಸಭೆಯಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮಗಳ ಕುರಿತು ತೀರ್ಮಾನ ಮಾಡಲಾಯಿತು ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ನಾಗರಿಕರು ಪ್ರತಿ ವರ್ಷದಂತೆ ಮಲೆನಾಡಿನಿಂದ ಆಗಮಿಸುವ ಜನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡವನ್ನು ತಮ್ಮ ಮನೆಗೆ ಕರೆಸಿಕೊಳ್ಳುವ ಬಗ್ಗೆ ಡಿ. ಮಂಜುನಾಥ,ಮೊ.ಸಂಖ್ಯೆ: 9449552795, ಭೈರಾಪುರ ಶಿವಪ್ಪಗೌಡ, ಮೊ.ಸಂಖ್ಯೆ: 9449911652 ಸಂಪರ್ಕಿಸಲು ಕೋರಿದ್ದಾರೆ.
ಉಳಿದಂತೆ ವಿದ್ಯಾರ್ಥಿಗಳಿಗಾಗಿ ಕಥಾ ಸಂಭ್ರಮ, ಬಹುಭಾಷಾ ಕವಿಸಮ್ಮೇಳನ, ಬಹುಭಾಷಾ ವೃಂದಗಾಯನ, ನೃತ್ಯ ಸಂಭ್ರಮ, ಶಾಲಾ ಕಾಲೇಜುಗಳ ಅಂಗಳದಲ್ಲಿ ಕಥೆ, ಕವನ, ಪ್ರಬಂಧ ರಚನಾ ಕಮ್ಮಟ, ದತ್ತಿ ಕಾರ್ಯಕ್ರಮ ಸೇರಿದಂತೆ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದ್ದು, ಸರ್ಕಾರದ ಸುತ್ತೋಲೆಯಂತೆ ಐದು ಕನ್ನಡ ಗೀತೆಗಳನ್ನು ಹಾಡಲು ಐದು ತಂಡ ರಚಿಸಲು ಐವರಿಗೆ ಜವಾಬ್ದಾರಿ ನೀಡಲಾಯಿತು.
ಗಾಯಕರಾದ ಲಲಿತಮ್ಮ ಪ್ರಾರ್ಥಿಸಿ, ಎಂ.ಎಂ. ಸ್ವಾಮಿ ಸ್ವಾಗತಿಸಿ, ಭೈರಾಪುರ ಶಿವಪ್ಪಗೌಡ ವಂದಿಸಿದರು. ಡಿ. ಗಣೇಶ್, ಡಾ.ಎಚ್.ಟಿ. ಕೃಷ್ಣಮೂರ್ತಿ, ಪ್ರೊ. ಸತ್ಯನಾರಾಯಣ, ಬಿ.ಟಿ. ಅಂಬಿಕಾ, ಮಮತಾ ಶಿವಣ್ಣ, ಸುಜಾತಾ, ಎಚ್. ಎಸ್. ರಘು, ಶ್ರೀನಿವಾಸ ನಗಲಾಪುರ, ನಾರಾಯಣ, ಕಾನೂರು ಮಲ್ಲಿಕಾರ್ಜುನ, ರಾಮಪ್ಪ ಗೌಡರು, ಬಿ. ಆಂಜನೇಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Related posts

ದಸರಾ ಉತ್ಸವ: ಸಕ್ರೆಬೈಲಿನ ಆನೆಬಿಡಾರದ ಮೂರು ಆನೆಗಳಿಗೆ ಅಂಬಾರಿ ಹೊರುವ ಜವಾಬ್ದಾರಿ.

ನವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಗಗನಕ್ಕೇರಿದ ಈರುಳ್ಳಿ ಬೆಲೆ: ದರ ನಿಯಂತ್ರಣಕ್ಕೆ ಸರಕಾರದ ಕಸರತ್ತು.

ವಾಹನ ಸವಾರರಿಗೆ ದೀಪಾವಳಿಗೂ ಮುನ್ನ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ..