ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಬಡವರಿಗೆ ನಿವೇಶನ ನೀಡುವವರೆಗೂ ಖಾಸಗಿಯವರಿಗೆ ಲೇಔಟ್ ನಿರ್ಮಿಸಲು ಅನುಮತಿ ನೀಡದಂತೆ ಸಚಿವ ಬೈರತಿ ಸುರೇಶ್  ಖಡಕ್ ಸೂಚನೆ-: ಕೃತಜ್ಞತೆ ಸಲ್ಲಿಸಿದ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ 

ಶಿವಮೊಗ್ಗ:  ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ  ಶೀಘ್ರವೇ ನಗರದಲ್ಲಿ  ಸರ್ಕಾರಿ ಲೇಔಟ್ ಸಿದ್ದಪಡಿಸಿ, ಬಡವರು, ಮಧ್ಯಮ ವರ್ಗದವರಿಗೆ ನಿವೇಶನ ನೀಡಬೇಕು, ಅಲ್ಲಿಯವರೆಗೆ ಖಾಸಗಿ  ಲೇಔಟ್ ಗಳಿಗೆ ಯಾವುದೇ ಅನುಮತಿ ನೀಡಬಾರದು ಎಂದು ಶಿವಮೊಗ್ಗ ನಗರ ಭೇಟಿ ವೇಳೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರಪಾಲಿಕೆ, ಕೆಯುಐಡಿಎಫ್ಸಿ,  ಮತ್ತು ನಗರ ಯೋಜನಾ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸೂಡಾ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಸರ್ಕಾರಿ ಲೇಔಟ್ ತುಂಬಾ ಕಡಿಮೆ ಇವೆ. ಜನಸಾಮಾನ್ಯರಿಗೆ ಅವರ ಕೈಗೆಟಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶ ವಾಗಿದೆ. ಕೇವಲ ಖಾಸಗಿಯವರಿಗೆ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುವುದು  ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸವಲ್ಲ
ಈಗಾಗಲೇ ಸೂಡಾದಿಂದ ನಿವೇಶನ ಕೋರಿ  ಮೊದಲನೇ ಆದ್ಯತೆಯಲ್ಲಿ 3000 ಜನರು ಅರ್ಜಿ ಹಾಕಿದ್ದಾರೆ, ಕೂಡಲೇ ಸ್ಥಳೀಯ ಶಾಸಕರು, ಸಂಸದರು , ಜನಪ್ರತಿನಿಧಿಗಳು ಮತ್ತು ಡಿಸಿ, ಅವರೊಂದಿಗೆ ಸೂಡಾ ಆಯುಕ್ತರು ಚರ್ಚಿಸಿ  250 ರಿಂದ 300 ಎಕರೆ ಜಾಗ ಗುರುತಿಸಿ ಸರ್ಕಾರಿ ಲೇಔಟ್ ಅಭಿವೃದ್ಧಿಪಡಿಸಿ , ಬಡವರು ಮಧ್ಯಮ ವರ್ಗದವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವುದರ ಮುಖಾಂತರ ಭೂ ಮಾಫಿಯಾಗಳಿಗೆ ಕಡಿವಾಣ ಹಾಕಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.  ಸಚಿವರ ಈ ಸೂಚನೆಯಿಂದ  ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ಕೈಗಟುವ ದರದಲ್ಲಿ ನಿವೇಶನ ಖರೀದಿಸಿ, ಮನೆ ಕಟ್ಟುವ ಕನಸಿಗೆ ಪುಷ್ಟಿ ಸಿಕ್ಕಂತಾಗಿದೆ. ಶಿವಮೊಗ್ಗ ಜಿಲ್ಲೆಯ ನಾಗರಿಕರ ಪರವಾಗಿ ಸಚಿವರಿಗೆ ಕೃತಜ್ಞತೆಗಳು ಎಂದು ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ತಿಳಿಸಿದ್ದಾರೆ.

Related posts

ಕಾವೇರಿ ನೀರು ವಿವಾದ:  ರಾಜಕೀಯ ಮರೆತು ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧಾರ-ಡಿಸಿಎಂ ಡಿ.ಕೆ ಶಿವಕುಮಾರ್.

ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ರಾಜ್‌ ಕುಮಾರ್‌ ಅಪಾರ ಅಭಿಮಾನ ಇರಿಸಿದ್ದರು-ನಾಡೋಜ ಡಾ.ಮಹೇಶ ಜೋಶಿ