ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ರೈತರಿಂದ ಸಂತಸ ಸಂಭ್ರಮಗಳಿಂದ ಭೂಮಿ ಹುಣ್ಣಿಮೆ ಆಚರಣೆ.

ಶಿವಮೊಗ್ಗ: ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂತಸ ಸಂಭ್ರಮಗಳಿಂದ ಆಚರಿಸಿದರು.
ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ ಜೀವನಾಡಿಯಾಗಿದೆ. ಭೂಮಿ ಹುಣ್ಣಿಮೆ ದಿನ ಭೂತಾಯಿತೆ ಸೀಮಂತ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ತಮ್ಮ ತಮ್ಮ ಹೊಲಗಳಲ್ಲಿ ಭತ್ತದ ಬೆಳೆಗೋ. ಅಡಿಕೆ ಮರಕ್ಕೋ ಸೀರೆ ಉಡಿಸಿ ಉಡಿ ತುಂಬುವುದು ವಾಡಿಕೆಯಾಗಿದೆ. ಜೊತೆಗೆ ಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಮಾಡಿ ಭೂದೇವಿಗೆ ಅರ್ಪಿಸಿ ಸಂಭ್ರಮಿಸುತ್ತಾರೆ.
ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ರೈತರು ಭೂಮಿ ಹುಣ್ಣಿಮೆ ಆಚರಿಸುತ್ತಾರೆ. ಭೂಮಣ್ಣಿ ಬುಟ್ಟಿ ತಯಾರಿಸಿ ಅದಕ್ಕೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿಕೊಂಡು ತಮ್ಮ ಹೊಲಗಳಿಗೆ ಹೋಗಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ನಂತರ ಚರಗವನ್ನು ತಮ್ಮ ಹೊಲದ ಸುತ್ತ ಬೀರುತ್ತಾರೆ.
ಮನೆಯವರೆಲ್ಲರೂ ಸಂತಸ ಸಂಭ್ರಮಗಳಿಂದ ಒಟ್ಟಾಗಿ ತೋಟದಲ್ಲೆ ಊಟ ಮಾಡುವ ದೃಶ್ಯ ಕೂಡ ಸುಂದರವಾಗಿರುತ್ತದೆ. ಒಟ್ಟಾರೆ ಭೂಮಿಯನ್ನೆ ನಂಬಿರುವ ನಮ್ಮ ರೈತರು ಇದನ್ನು ಆರಾಧನೆಯಂತೆ ಮಾಡುತ್ತಾರೆ. ನೀರಾವರಿ ಪ್ರದೇಶದಲ್ಲಿ ರೈತರು ಒಂದಿಷ್ಟು ಸಮಾಧಾನವಾಗಿದ್ದರೆ ಬಯಲುಸೀಮೆಯಲ್ಲಿ ಮಾತ್ರ ರೈತರ ಗೋಳು ತಪ್ಪಿಲ್ಲ. ಬರಗಾಲ ಕಾಲಿಟ್ಟಿದ್ದು ಬೆಳೆಯೆಲ್ಲಾ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಭೂಮಿ ಹುಣ್ಣಿಮೆಯನ್ನು ಹೇಗೆ ಮಾಡುವುದು ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

Related posts

ಇನ್ಮುಂದೆ ಯಾವುದೇಪೋಸ್ಟಿಂಗ್ ಮತ್ತು ವರ್ಗಾವಣೆಗೆ ಸಿಎಂ ಪೂರ್ವಾನುಮತಿ ಕಡ್ಡಾಯ.

ನಾನು ಭ್ರಷ್ಟನಲ್ಲ,ಲಂಚ ಸ್ವೀಕರಿಸುವುದಿಲ್ಲ- ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿ

ಕಾಮನ್ ಮ್ಯಾನ್ ಸಂಸ್ಥೆ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ.