ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಇನ್ಮುಂದೆ ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡಿದ್ರೆ ಎಚ್ಚರ: ಟಫ್ ರೂಲ್ಸ್ ಜಾರಿ.

ಬೆಂಗಳೂರು; ಹುಲಿ ಉಗುರು ಪೆಂಡೆಂಟ್ ಧರಿಸಿರುವವರಿಗೆ ಈಗಾಗಲೇ ಅರಣ್ಯ ಇಲಾಖೆ ಬಿಸಿ ಮುಟ್ಟಿಸಿದ್ದು, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನ ಬಂಧಿಸಿದ್ದಾರೆ. ಹಾಗೆಯೇ ನಟರಾದ ಜಗ್ಗೇಶ್, ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಶೋಧಿಸಿ ನೋಟಿಸ್ ನೀಡಿದ್ದಾರೆ.

ಇನ್ಮುಂದೆ ಹುಲಿ ಉಗುರು ಪೆಂಡೆಂಟ್ ಧರಿಸಿ ಶೋಕಿ ಮಾಡೋರಿಗೆ ಅರಣ್ಯ ಇಲಾಖೆ ಬಿಗ್ ಶಾಕ್ ನೀಡಿದೆ. ಅರಣ್ಯ ಇಲಾಖೆ ಮತ್ತಷ್ಟು ಟಫ್ ರೂಲ್ಸ್ ತರಲು ಮುಂದಾಗಿದೆ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದರೆ ಲಾಕ್ ಆಗೋದು ಖಚಿತ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಕಾನೂನಿನ ನಿಯಮಗಳು ಮತ್ತಷ್ಟು ಕಠಿಣ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಒಂದು ವಾರದೊಳಗೆ ಸಮಗ್ರ ವರದಿ ಸಿದ್ದಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.  ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ವರದಿ ರೆಡಿಯಾಗಲಿದೆ.

ಇನ್ಮುಂದೆ ರಫ್ & ಟಫ್ ರೂಲ್ಸ್ ಜಾರಿಗೆ ಅರಣ್ಯ ಇಲಾಖೆ ಸಿದ್ದತೆ ನಡೆಸಿದ್ದು, ಇಷ್ಟು ದಿನ ವನ್ಯಜೀವಿ ವಸ್ತುಗಳ ನಿಷೇಧ ಕಾಯ್ದೆಯ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಿರಲಿಲ್ಲ. ಆದ್ರೆ ಎಲ್ಲೆಡೆ ಹುಲಿ ಚರ್ಮ, ಉಗುರು,ಕೊರಳಿನಲ್ಲಿ ಹಾಕಿಕೊಂಡು ಶೋಕಿ ಮಾಡುತ್ತಿದ್ದಾರೆ. ಹೀಗಾಗಿ ನಿಯಮಗಳನ್ನು ಕಠಿಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಹುಲಿ ಉಗುರು ಬಳಸುತ್ತಿರುವ ಮೇಲೆ ಹದ್ದಿನ ಕಣ್ಣು ಇಡಲು ಇಲಾಖೆ ನಿರ್ಧಾರ ಮಾಡಿದ್ದು, ಹುಲಿ ಉಗುರು ಬಳುಸುತ್ತಿರುವ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

 

Related posts

 ಬಸ್ ಅಪಘಾತ: ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ 17 ಮಂದಿ ಭಕ್ತರಿಗೆ ಗಂಭೀರ ಗಾಯ.

ಸೆ.23 ರಂದು ಮಂಡ್ಯ ಜಿಲ್ಲಾ ಬಂದ್ ಗೆ ಕರೆ.

ಜ್ಞಾನದೀಪ ಶಾಲೆ ಮಕ್ಕಳಿಂದ ಸೇವಾ ಕಾರ್ಯ-ವಾಣಿ ಕೃಷ್ಣಪ್ರಸಾದ್