ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹಣಮಂತ ದೇವನೂರವರಿಗೆ ರೋಟರಿ ಶಿವಮೊಗ್ಗ ಪೂರ್ವದಿಂದ ಸನ್ಮಾನ

ಶಿವಮೊಗ್ಗ: ಕಲಬುರಗಿಯಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕುಷ್ಟರೋಗಿಗಳ ಆಶಾಕಿರಣ ಹಣಮಂತ ದೇವನೂರ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ಹಾಗೂ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿನೋಬನಗರದ ಅಮ್ಮ ಆರ್ಕೇಡ್‌ನಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣಮಂತ ದೇವನೂರ ಅವರನ್ನು ಅಭಿನಂದಿಸಲಾಯಿತು. ಸಾರ್ಥಕ ಕೆಲಸ ಮಾಡುತ್ತಿರುವ ದೇವನೂರ ಅವರ ಕಾರ್ಯ ಇತರರಿಗೂ ಸ್ಪೂರ್ತಿಯಾಗಿದೆ.

ಕಲಬುರಗಿಯಲ್ಲಿ ಕುಷ್ಟರೋಗಿಗಳ ಆಪದ್ಭಂದು ಹಣಮಂತ ದೇವನೂರ ಅವರು ಇಪ್ಪತ್ತೆರಡು ವರ್ಷಗಳಿಂದ 174 ಕುಷ್ಟರೋಗಿಗಳಿಗೆ ಸೇವೆ ಮಾಡುತ್ತಾ, ಅವರಿಗೆ ಸರ್ಕಾರದಿಂದ 86 ಆಶ್ರಯ ಮನೆಗಳು, ವೃದ್ಧಾಪ್ಯವೇತನ, ಮಕ್ಕಳಿಗೆ ವಿದ್ಯಾಭ್ಯಾಸ, ರೋಗ ವಿಮುಕ್ತರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವು, ಸಮುದಾಯ ಭವನ, ಹೀಗೆ ಹತ್ತು ಹಲವಾರು ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ.

ರಿಕ್ಷಾ ಚಾಲಕ ಹಣಮಂತ ದೇವನೂರ ಅವರು ಕುಷ್ಟ ರೋಗಿಗಳ ಆಶಾಕಿರಣವಾಗಿದ್ದಾರೆ. ಇತ್ತೀಚೆಗಷ್ಟೆ ಶ್ರೀ ದೊಡ್ಡಮ್ಮ ದೇವಿ ಚಾರಿಟಬಲ್ ಟ್ರಸ್ಟ್ ಶಿವಮೊಗ್ಗ ಸಂಸ್ಥೆಯು ಹಣಮಂತ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಒಂದು ಲಕ್ಷ ಪ್ರಶಸ್ತಿ ಮೊತ್ತವನ್ನು ನೀಡಿದೆ.

ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಮತ್ತು ನಮ್ಮ ಟಿವಿ ವತಿಯಿಂದ ಸನ್ಮಾನಿಸಲಾಯಿತು. ಜಿ.ವಿಜಯಕುಮಾರ್ ಅವರು ಎರಡೂ ಸಂಸ್ಥೆಗಳ ಪರವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್, ಶ್ರೀಕಾಂತ್ ಉಪಸ್ಥಿತರಿದ್ದರು.

ಹಣಮಂತ ದೇವನೂರ ಅವರ ಟಿ.ವಿ.ಸಂದರ್ಶನ ನಮ್ಮ ಟಿವಿ ಯಲ್ಲಿ ಪ್ರಸಾರವಾಗುತ್ತದೆ. ಇಂತಹ ಅಪರೂಪದ ಸೇವಾ ಕಾರ್ಯ ಗುರುತಿಸಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸನ್ಮಾನಿಸಿದೆ.

Related posts

ಸರ್ಕಾರಿ ನೌಕರರನ್ನು 90 ದಿನಗಳಿಗಿಂತ ಹೆಚ್ಚು `ಅಮಾನತು’ಗೊಳಿಸುವಂತಿಲ್ಲ : ಸುಪ್ರೀಂ ಕೋರ್ಟ್

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ದಿಟ್ಟ ಕ್ರಮಕ್ಕೆ ಮುಂದಾದ ಸರ್ಕಾರ