ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅ.28ರಂದು ಶಿವದೂತ ಗುಳಿಗ ಪ್ರದರ್ಶನ.

ಶಿವಮೊಗ್ಗ: ರಂಗಭೂಮಿಯಲ್ಲಿ ದಾಖಲೆ ಸೃಷ್ಟಿಸಿದ ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದ ಕನ್ನಡ ನಾಟಕ ಶಿವದೂತ ಗುಳಿಗ ಪ್ರದರ್ಶನ ಅ.28ರಂದು ಸಂಜೆ 6-30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕ ಜಾದುಗಾರ್ ವಿಕ್ರಮ್ ಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ನಾಟಕವೊಂದು ಅದ್ಭುತ ಹಾಗೂ ವಿಸ್ಮಯವಾಗಿದೆ. ಒಂದು ರೀತಿಯಲ್ಲಿ ಸಿನಿಮಾ ನೋಡಿದ ಹಾಗಾಗುತ್ತದೆ. ದೈವವನ್ನೇ ಮುಖ್ಯವಾಗಿಟ್ಟುಕೊಂಡು ವಿಭಿನ್ನ ಶೈಲಿಯಲ್ಲಿ ಈ ನಾಟಕ ಮೂಡಲಿದೆ. ಈ ಶಿವದೂತ ಗುಳಿಗ ಅಕ್ಟೋಬರ್ 28ರ ರಾತ್ರಿ ಕಾಣಿಸುತ್ತಾನೆ ಎಂದರು.
ಈಗಾಗಲೇ ಭಾರತದ ಅನೇಕ ಜಾಗದಲ್ಲಿ ಕಾಣಿಸಿಕೊಂಡಿರುವ ಈ ಗುಳಿಗ ನಂಬಿದ ಭಕ್ತರ ಉದ್ದಾರಕ್ಕಾಗಿ ಶಿವಮೊಗ್ಗದ ಕುವೆಂಪು ಹೆಸರಿನ ನೆಲದಲ್ಲಿ ಆಶೀರ್ವಾದ ನೀಡಲು ತಯಾರಾಗಿ ನಿಂತಿದ್ದಾನೆ. ದೈವ ಮತ್ತು ದೇವರನ್ನು ಒಂದೇ ಎಂದು ನಂಬಿದ ನಮಗೆ ಕಣ್ಣಿಗೆ ಕಾಣಿಸಿಕೊಳ್ಳುವ ದೇವರೇ ನಮ್ಮ ಹತ್ತಿರದ ದೈವವಾಗಿದೆ. ಈ ಎಲ್ಲ ದೈವಗಳು ನಮ್ಮ ನಮ್ಮ ಮನೆತನಗಳ ಪೂರ್ವಿಕರೇ ಆಗಿದ್ದು ನಮ್ಮ ಕಷ್ಟ ಪರಂಪರೆಯನ್ನು ತೊಲಗಿಸಲು ಆಗಾಗ ಆಗಮಿಸುತ್ತ ಇರುತ್ತದೆ. ಇಂಥ ಮಹಾನ್ ದೈವಗಳಲ್ಲಿ ಒಂದಾದ ಜಗತ್ತಿನ ಲಯಕರ್ತನಾದ ಶಿವನ ರುಂಡಮಾಲೆಯಲ್ಲಿ ಅಡಗಿದ್ದ ದುಷ್ಟರ ನಾಶ ಮಾಡುವ ಶಿಷ್ಟರ ರಕ್ಷಿಸುವ ಉದ್ದೇಶದಿಂದ ಆಗಾಗ ಭೂಮಿಯಲ್ಲಿ ಅವತರಿಸುತ್ತಾನೆ ಎಂದರು.
ಇದು ನಾಟಕವೇ ಆಗಿದ್ದರೂ ವಿಶಾಲ ಅರ್ಥದಲ್ಲಿ ನಮ್ಮ ಕೆಡುಕುಗಳನ್ನು ನಾಶಮಾಡಿ ನಮ್ಮ ಅಂತಃಶಕ್ತಿ ಬಡಿದೆಬ್ಬಿಸಿ ಒಳಿತನ್ನು ಉಂಟು ಮಾಡುವ ಶಕ್ತಿ ಈ ನಾಟಕಕ್ಕಿದೆ. ನಾಗಮಂಡಲ ಡಕ್ಕೆಬಲಿ ಭೂತಕೋಲದ ಉದ್ದೇಶ ಹೇಗಿದೆಯೋ ಅದೇ ಉದ್ದೇಶ ಈ ನಾಟಕಕ್ಕೂ ಇದೆ.
ಪೌರಾಣಿಕ ಅದ್ಧೂರಿ ದೃಶ್ಯ ಸಂಯೋಜನೆ ಹೊಂದಿರುವಂತಹ ಆಚಾರ, ವಿಚಾರ, ಸಂಸ್ಕøತಿಗೆ ಸಂಬಂಧಿಸಿದ, ಜನರು ಆರಾಧಿಸುವ ದೈವಗಳ ಕಥಾನಕವನ್ನು ನಾಟಕವನ್ನಾಗಿ ರೂಪಿಸಲಾಗಿದೆ ಎಂದರು.
ರಂಗಪ್ರೇಮಿ ಕೆ.ಜಿ. ವೆಂಕಟೇಶ್ ಮಾತನಾಡಿ, ಪ್ರಮುಖ ನಿರ್ದೇಶಕರಲ್ಲೊಬ್ಬರಾಗಿರುವ ವಿಜಯಕುಮಾರ್ ಕೊಡಿಯಾಲ್‍ಬೈಲ್ ಅವರು “ಶಿವದೂತ ಗುಳಿಗ’ ನಾಟಕದ ನಿರ್ದೇಶನ ಮಾಡಿದ್ದಾರೆ. ಎ.ಕೆ. ವಿಜಯ್ ಸಂಗೀತ ನೀಡಿದ್ದಾರೆ. ಇದು ಗೌರವ ಪ್ರವೇಶವಾಗಿದ್ದು, ಟಿಕೆಟ್ ಬೆಲೆ 500 ಮತ್ತು 1000ರೂ. ಇರುತ್ತದೆ. ಟಿಕೆಟ್ ಮತ್ತು ವಿವರಗಳಿಗೆ ಮೊ: 9448108222 ಮತ್ತು 8073579575ರಲ್ಲಿ ಸಂಪರ್ಕಿಸಬಹುದಾಗಿದೆ.
ಮಂಗಳೂರಿನ ಪುರಭವನದಲ್ಲಿ ಆರಂಭವಾದ ಶಿವದೂತ ಗುಳಿಗ ನಾಟಕದ ಮೊದಲ ಹೆಜ್ಜೆಯಿಂದ ಹಿಡಿದು 517ನೇ ಪ್ರದರ್ಶನವಾಗಿದೆ. ಮತ್ತು 1000ದ ಪ್ರದರ್ಶನಕ್ಕೆ ಮುನ್ನುಗ್ಗುತಿದೆ. 37 ಕಲಾವಿದರು ಇದರಲ್ಲಿ ನಟಿಸುತ್ತಿದ್ದಾರೆ. ಪ್ರಥಮ ಪ್ರದರ್ಶನದಿಂದಲೇ ಈ ನಾಟಕ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದರು.
ಕಲಾ ಸಂಗಮ ತಂಡದ ಕಲಾವಿದರು ನಾಟಕದ ದೃಶ್ಯಾವಳಿಗಳಿಗೆ ಜೀವ ತುಂಬಿದ್ದಾರೆ. ಪರಮಾನಂದ ವಿ. ಸಾಲ್ಯಾನ್ ಅವರ ಸಂಭಾಷಣೆ ಗುರುದೇವ ಆಟ್ರ್ಸ್ ಬಂಟ್ವಾಳ, ಶರತ್ ಪೂಜಾರಿ ಮಾಲೆಮಾರ್ ವಸ್ತ್ರ ವಿನ್ಯಾಸ, ಹರೀಶ್ ಆಚಾರ್ಯ, ಚಂದ್ರಶೇಖರ ಶಿರ್ವ ಮಟ್ಟಾರ್ ರಂಗವಿನ್ಯಾಸ ಮಾಡಿದ್ದಾರೆ.
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕದ ಬೊಳ್ಳಿ ದೇವದಾಸ್ ಕಾಪಿಕಾಡ್, ಡಾ| ವೈಷ್ಣವಿ, ರವೀಂದ್ರ ಪ್ರಭು, ನರಸಿಂಹ ಕಿಣಿ, ವಿಶಾಲ್ ರಾಜ್ ಕೋಕಿಲ ಇವರ ಹಿನ್ನೆಲೆ ಸಂಗೀತವಿದ್ದು ಎ.ಕೆ. ವಿಜಯ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಗುಳಿಗನ ಪಾತ್ರವನ್ನು ಕಾಂತಾರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮಾಡಿದ್ದಾರೆ. ನಿತೇಶ್ ಕಿನ್ನಿಗೋಳಿ, ವಿನೋದ್ ರಾಜ್ ಕೋಕಿಲ, ರಮೇಶ್ ಕಲ್ಕಡ್ಕ, ಕೀತ್ ಪುರ್ತಾಡೋ, ಧನು ಕುಲಾಲ್ ಬೊಳಂತೂರು, ಜಯರಾಮ ಅಚಾರ್ಯ ಮಂಜೇಶ್ವರ, ರಜತ್ ಕದ್ರಿ, ಶರಣ್ ಶೆಟ್ಟಿ ವೇಣೂರು, ಸಾಗರ ಮಡಂತ್ಯಾರ್, ರಕ್ಷಿತ ರಾವ್, ಕಾಜಲ್ ಬಂಗೇರ ನಾಟಕದಲ್ಲಿ ಅಭಿನಯಿಸಿದ್ದಾರೆ.

 

Related posts

ಸಮಸ್ತ ಇಸ್ರೋ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು…ರಮೇಶ್ ಶೆಟ್ಟಿ ಶಂಕರಘಟ್ಟ

ಬಿವೈ ವಿಜಯೇಂದ್ರರನ್ನ ಅಳೆದು ತೂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ- ಅರವಿಂದ ಲಿಂಬಾವಳಿ.

ಸಂಚಾರ ನಿಯಮಗಳ ಬಗ್ಗೆ ಜಾಗೃತಿ; ಪೊಲೀಸರಿಂದ ಬೈಕ್ ಜಾಥಾ..