ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯಸಿನಿಮಾ

ಹುಲಿ ಉಗುರು ಪ್ರಕರಣ: ನಟ ಹಾಗೂ ಸಂಸದ ಜಗ್ಗೇಶ್ ಗೂ ಸಂಕಷ್ಟ.

ಬೆಂಗಳೂರು:  ಹುಲಿ ಉಗುರು ಧರಿಸಿದ್ದ ಪ್ರಕರಣರದಲ್ಲಿ ನಟ  ಹಾಗೂ ಸಂಸದ ಜಗ್ಗೇಶ್ ಗೂ ಸಂಕಷ್ಟ ಎದುರಾಗಿದೆ.

ಇದೀಗ ಹುಲಿ ಉಗುರು ಧರಿಸಿದ್ದ ಪ್ರಕರಣರದಲ್ಲಿ ವರ್ತೂರು ಸಂತೋಷ್ ಬಂಧನದ ಬಳಿಕ ನಟ ದರ್ಶನ್  ಹಾಗೂ ವಿನಯ್ ಗುರೂಜಿ ವಿರುದ್ದ ದೂರು ದಾಖಲಾಗಿತ್ತು. ಇದೀಗ ನಟ ಜಗ್ಗೇಶ್ ವಿರುದ್ದವೂ ದೂರು ನೀಡಲಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರಕುಮಾರ್ , ಹುಲಿ ಉಗುರು  ಧರಿಸಿದ್ದ ಪ್ರಕರಣ ಸಂಬಂಧ ನಟ ದರ್ಶನ್,  ಜಗ್ಗೇಶ್ ಅವರಿಗೆ ನೋಟಿಸ್ ನೀಡುವ ಅವಕಾಶವಿದೆ ಜಗ್ಗೇಶ್ ತಾವೇ ಅದು ಒರಿಜಿನಲ್ ಅಂತಾ ಡಿಕ್ಲೇರ್ ಮಾಡಿದ್ದಾರೆ.  ನಟ ದರ್ಶನ್ ವಿರುದ್ದ ಕೂಡು ದೂರು ಬಂದಿದೆ. ಇಬ್ಬರಿಗೂ ನೋಟಿಸ್ ನೀಡುವ ಅವಕಾಶವಿದೆ. ಪ್ರಕರಣ ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ

ಸಂತೋಷ್ ಬಳಿಕ ಬೇರೆಯವರ ವಿರುದ್ದವೂ ಕ್ರಮಕ್ಕೆ ದೂರು ಬರ್ತೀವೆ ವನ್ಯಜವಿ ಸಂರಕ್ಷಣಾ ಕಾಯ್ದೆ ಅಡಿ ದೂರು ಬಂದರೇ ಕ್ರ ಮ ಕೈಗೊಳ್ಳಲಾಗುತ್ತದೆ  ಎಂದು ತಿಳಿಸಿದ್ದಾರೆ.

ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ  ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ಹುಲಿ ಉಗುರು ಲಾಕೆಟ್​​​​ ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್​ ವಿರುದ್ಧ ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Related posts

ರಾಜ್ಯದಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ.

ನಾಳಿನ ಸರ್ವಪಕ್ಷ ಸಭೆ:  ಮಾಜಿ ಸಿಎಂಗಳಿಗೆ ಆಹ್ವಾನ ನೀಡಿದ ಸಿಎಂ ಸಿದ್ಧರಾಮಯ್ಯ 

ಕ್ರೀಡೆಯಿಂದ ಶಿಸ್ತು, ಏಕಾಗ್ರತೆ  ಬೆಳೆಯುವುದು-ಚನ್ನಪ್ಪ