ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನಾಡಿನ ಜನತೆಗೆ ವಿಜಯದಶಮಿಯ ಶುಭ ಕೋರಿದ ಸಿಎಂ ಸಿದ್ಧರಾಮಯ್ಯ.

ಮೈಸೂರು, : ಕನ್ನಡ ನಾಡಿನ ಜನರಿಗೆ ದಸರಾ ಮಹೋತ್ಸವ ವಿಜಯದಶಮಿಯ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಳೆ ಬೆಳೆಯಾಗಿ, ರಾಜ್ಯ ಸುಭೀಕ್ಷವಾಗಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.

ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಇಂದು ವಿಜಯದಶಮಿ ಹಬ್ಬ. ಮಧ್ಯಾಹ್ನ ನಂದಿಧ್ವಜ ಪೂಜೆ ನೆರವೇರಿಸಿ, ನಂತರ ಜಂಬೂಸವಾರಿಯ ಅಂಬಾರಿ ಮೆರವಣಿಗೆ ಪ್ರಾರಂಭವಾಗಲಿದೆ.

ಮೆರವಣಿಗೆ ಬನ್ನಿಮಂಟಪಕ್ಕೆ ತಲುಪಿದ ನಂತರ  ಪಂಜಿನ ಮೆರವಣಿಗೆ ರಾತ್ರಿ 8 ರವರೆಗೆ ನಡೆಯಲಿದೆ.    ಮಳೆಯ ಅಭಾವ, ವಿದ್ಯುತ್ ಕೊರತೆಯಿಂದ ರೈತರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಮಳೆಯಾಗಿ, ರೈತರು ಬೆಳೆದ ಬೆಳೆಗಳು ಉಳಿಯುವಂತಾಗಲಿ ಎಂದು ಸಿದ್ಧರಾಮಯ್ಯ ಹಾರೈಸಿದರು.

Related posts

ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆ: ಫೇಲ್ ಆದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಅವಕಾಶ- ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ

ಮಹಿಳೆಯರಿಗೆ ಗುಡ್ ನ್ಯೂಸ್: ಉದ್ಯೋಗದಲ್ಲಿ ಶೇ 35ರಷ್ಟು ಮೀಸಲಾತಿ.

ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಆರು ಪ್ರಥಮ, ಎರಡು ದ್ವಿತೀಯ ಸ್ಥಾನ ಪಡೆದು ಸಾಧನೆಗೈದ ದುರ್ಗಿಗುಡಿ ಶಾಲೆಯ ಮಕ್ಕಳು