ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬಹುತೇಕ ಜಲಾಶಯಗಳು ಭರ್ತಿಯಾಗದೇ ಬರಗಾಲ ಆವರಿಸಿದೆ. ಈ ಮಧ್ಯೆಯೂ 33 ಸಚಿವರಿಗೆ ಇನ್ನೋವಾ ಹೈಬ್ರೀಡ್ ಕಾರು ಖರೀದಿಸಿದೆ.
ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಎಂದು ಹೇಳಿತ್ತಿದ್ದ ಸರ್ಕಾರದಿಂದಲೇ ಕಾರು ಖರೀದಿಯಾಗಿರುವುದು ಎಲ್ಲೇಡೆ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಹೈಬ್ರೀಡ್ ಕಾರ್ ಖರೀದಿಸಲಾಗಿದೆ.
ಅಗಸ್ಟ್ ತಿಂಗಳ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ಹಣ ಬಿಡುಗಡೆ ಮಾಡಲಾಗಿತ್ತು. ದಸರಾ ಆರಂಭವಾಗುತ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಕಾರುಗಳು ಬಂದಿವೆ.