ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಇಸ್ರೇಲ್-ಹಮಾಸ್ ಸಂಘರ್ಷ ಅಂತ್ಯಕ್ಕೆ ನೆರವಾಗಲು ರಷ್ಯಾ ಸಿದ್ಧ ಎಂದ ಪುಟಿನ್

ಬ್ರಿಟನ್: ಇಸ್ರೇಲ್-ಹಮಾಸ್  ಉಗ್ರರ ನಡುವೆ ಯುದ್ಧ ಮುಂದುವರೆದಿದ್ದು, ಸಂಘರ್ಷ ಅಂತ್ಯಕ್ಕೆ ನೆರವಾಗಲು ರಷ್ಯಾ ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷವನ್ನು ಕೊನೆಗೊಳಿಸಲು ನೆರವಾಗಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಹೇಳಿದೆ.

‘ಪರಿಸ್ಥಿತಿಯನ್ನು ತಿಳಿಗೊಳಿಸಲು, ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳದಂತೆ ಹಾಗೂ ಗಾಜಾ ಪಟ್ಟಿಯಲ್ಲಿ ಮಾನವೀಯ ದುರಂತವನ್ನು ತಡೆಯಲು ರಷ್ಯಾ ಕ್ರಮ ಕೈಗೊಳ್ಳುತ್ತಿರುವುದಾಗಿ ನೆತನ್ಯಾಹು ಅವರಿಗೆ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ’ ಎಂದು ಕ್ರೆಮ್ಲಿನ್ ಮಾಹಿತಿ ನೀಡಿದೆ.

ಪುಟಿನ್ ಅವರು ಇರಾನ್, ಈಜಿಪ್ಟ್, ಸಿರಿಯಾ ಮತ್ತು ಪ್ಯಾಲೆಸ್ಟೇನ್ ನಾಯಕರರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ. ನಾಗರಿಕರ ವಿರುದ್ಧದ ಯಾವುದೇ ಹಿಂಸಾಚಾರವನ್ನು ಒಪ್ಪಲಾಗದು ಎಂದೂ ಅದು ಪ್ರತಿಪಾದಿಸಿದೆ.

ಹಮಾಸ್ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ವಿದ್ಯುತ್, ಇಂಧನ, ಆಹಾರ, ನೀರಿನ ಸರಬರಾಜು ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ದಾಳಿ ಇದೀಗ ಸಿರಿಯಾಗೂ ವಿಸ್ತರಿಸಿದೆ. ಇದರ ನಡುವೆ, ಅರಬ್ ದೇಶಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಎಂದು ಇರಾನ್ ಕರೆ ನೀಡಿರುವುದು ಹೊಸದೊಂದು ಪ್ರಾದೇಶಿಕ ಬಿಕ್ಕಟ್ಟಿಗೆ ನಾಂದಿ ಹಾಡಿದೆ.

ಪ್ಯಾಲೆಸ್ತೇನ್ ಗೆ 10 ಮಿಲಿಯನ್ ಪೌಂಡ್ ನೆರವು ಘೋಷಿಸಿದ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್

ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶಗಳಲ್ಲಿ (ಒಪಿಟಿ) ಸಿಲುಕಿರುವ ಫೆಲೆಸ್ತೀನ್ ನಾಗರಿಕರಿಗೆ 10 ಮಿಲಿಯನ್ ಪೌಂಡ್ ಮೌಲ್ಯದ ಧನಸಹಾಯವನ್ನು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ.

ಈ ನೆರವು “ಅಸ್ತಿತ್ವದಲ್ಲಿರುವ ನೆರವಿನ ಮೂರನೇ ಒಂದು ಭಾಗದಷ್ಟು ಹೆಚ್ಚಳವಾಗಿದೆ” ಮತ್ತು ಈ ಪ್ರದೇಶವನ್ನು ಬೆಂಬಲಿಸಲು ಈ ವರ್ಷ ಅಸ್ತಿತ್ವದಲ್ಲಿರುವ 27 ಮಿಲಿಯನ್ ಪೌಂಡ್ಗಳಿಗೆ ಯುಕೆ ಧನಸಹಾಯಕ್ಕೆ ಶೇಕಡಾ 37 ರಷ್ಟು ಏರಿಕೆಯಾಗಿದೆ,

ಇದರಲ್ಲಿ ಯುಕೆ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಈ ವರ್ಷದ ಸೆಪ್ಟೆಂಬರ್ನಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಸುಮಾರು 6 ಮಿಲಿಯನ್ ಫೆಲೆಸ್ತೀನ್ ನಿರಾಶ್ರಿತರಿಗೆ ಹೆಚ್ಚುವರಿ 10 ಮಿಲಿಯನ್ ಪೌಂಡ್ಗಳನ್ನು ಘೋಷಿಸಿದ್ದಾರೆ.                                                       ಕಳೆದ ವಾರಾಂತ್ಯದಲ್ಲಿ ಇಸ್ರೇಲ್ನಲ್ಲಿ ನಡೆದ ದಾಳಿಗಳು ಜಗತ್ತನ್ನು ಬೆಚ್ಚಿಬೀಳಿಸಿವೆ, ವೃದ್ಧರು, ಪುರುಷರು, ಮಹಿಳೆಯರು, ಮಕ್ಕಳು ಮತ್ತು ಶಿಶುಗಳನ್ನು ಕೊಲೆ ಮಾಡಲಾಗಿದೆ, ವಿರೂಪಗೊಳಿಸಲಾಗಿದೆ ಮತ್ತು ಜೀವಂತವಾಗಿ ಸುಟ್ಟುಹಾಕಲಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

 

Related posts

ಡೀಪ್ ಫೇಕ್: ಕೇಂದ್ರದಿಂದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಿಗೆ 7 ದಿನದ ಗಡುವು..

ಮೆಗ್ಗಾನ್ ಆಸ್ಪತ್ರೆ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ : ಮಹಿಳೆಗೆ ಜೀವದಾನ

ಒರಿಜಿನಲ್ ಜೆಡಿಎಸ್ ನಮ್ಮದೇ:  ಬಿಜೆಪಿ ಜೊತೆ ಹೋಗಲ್ಲ- ಹೆಚ್ ಡಿಡಿ ಮತ್ತು ಹೆಚ್.ಡಿಕೆಗೆ ಸೆಡ್ಡು ಹೊಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ