ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ನಾನು‌ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ರೆ ಹೆಚ್.ಡಿ ಕುಮಾರಸ್ವಾಮಿಯವರನ್ನ 6 ವರ್ಷ ಅಮಾನತು ಮಾಡ್ತಿದ್ದೆ- ಎಂಎಲ್ ಸಿ ಹೆಚ್.ವಿಶ್ವನಾಥ್

ಮೈಸೂರು:  ಜೆಡಿಎಸ್ ನಿಂದ ಹೆಚ್.ಡಿ ಕುಮಾರಸ್ವಾಮಿ  ಉಚ್ಚಾಟನೆ ಬಗ್ಗೆ ಸಿಎಂ  ಇಬ್ರಾಹಿಂ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಸಿ.ಎಂ.ಇಬ್ರಾಹಿಂ ಸ್ಟ್ಯಾಂಡ್ ಕರೆಕ್ಟಾಗಿದೆ. ನಾನು‌ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನ 6 ವರ್ಷ ಅಮಾನತು ಮಾಡ್ತಿದ್ದೆ ಎಂದು ಸಿಎಂ ಇಬ್ರಾಹಿಂ ಪರ ಬ್ಯಾಟ್ ಬೀಸಿದರು.

ಇಬ್ರಾಹಿಂ ಸ್ಟ್ಯಾಂಡ್ ಕರೆಕ್ಟಾಗಿದೆ. ರಾಷ್ಟ್ರೀಯ ಅಧ್ಯಕ್ಷರಿಗೆ ವಿಧೇಯನಾಗಿರುತ್ತೇನೆ. ಕುಮಾರಸ್ವಾಮಿಗೆ ನನಗೂ ಸಂಬಂಧ ಇಲ್ಲ ಅನ್ನೋದು ನಿಜ. ಕುಮಾರಸ್ವಾಮಿ ವೈಕ್ತಿಯವಾಗಿ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ. ಜ್ಯಾತ್ಯಾತೀತ ಅನ್ನೋ ಅರ್ಥವನ್ನೆ ತೆಗೆದು‌ ಹಾಕಿದ್ದಾರೆ. ಸಿ.ಎಂ.ಇಬ್ರಾಹಿಂ ತೆಗೆದುಕೊಂಡ ನಿಲುವು ರಾಜಕೀಯ ಹಿನ್ನಲೆಗೆ ಸರಿಯಾಗಿದೆ. ಸಿಎಂ ಇಬ್ರಾಹಿಂದ ಉಚ್ಚಾಟನೆ ಮಾಡುವ ಅಧಿಕಾರ ಇದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಅಮಾನತು ಮಾಡುವ ಅಧಿಕಾರವಿದೆ. ಜ್ಯಾತ್ಯಾತೀತ ಶಕ್ತಿ ಕೊಲೆ ಮಾಡಿ, ಜಾತಿವಾದಿ, ಕೋಮುವಾದಿ ಬಿಜೆಪಿ ಜೊತೆ ಮದುವೆ ಹಾಕ್ತೀನಿ ಅಂತಿದ್ದಾರೆ ಕುಮಾರಸ್ವಾಮಿ. ಅಂತಹವರನ್ನ ಅಮಾನತು ಮಾಡುವ ಅಧಿಕಾರ ಇಬ್ರಾಹಿಂಗೆ ಇದ್ದೆ ಇದೆ. ನಾನು ಈಗ ರಾಜ್ಯಾಧ್ಯಕ್ಷನಾಗಿದ್ರೆ ಕುಮಾರಸ್ವಾಮಿಯನ್ನ 6 ವರ್ಷಗಳ ಕಾಲ ಉಚ್ಛಾಟನೆ ಮಾಡ್ತಿದ್ದೆ. ಅದನ್ನ ಸಿ.ಎಂ ಇಬ್ರಾಹಿಂ ಮಾಡ್ತಾರೆ. ಕ್ರಮ ಆಗೇ ಆಗುತ್ತೆ, ಯಾಕೆ ಆಗಲ್ಲ. ಯಾರು ಕುಮಾರಸ್ವಾಮಿಯೊಂದಿಗೆ ಚಮಚಾಗಿರಿ ಮಾಡೋರು ಅವರು ಮೈತ್ರಿಗೆ ಒಪ್ಪುತ್ತಾರೆ ಅಷ್ಟೇ ಎಂದು ಎಚ್ ವಿಶ್ವನಾಥ್ ಹೇಳಿದರು.

Related posts

ಕೋಟ್ಯಾಂತರ ರೂ.ಮೌಲ್ಯದ ಡ್ರಗ್ಸ್ ಜಪ್ತಿ: ಮೂವರು ವಿದೇಶೀಯರು ಸೇರಿ 14 ಮಂದಿ ಅರೆಸ್ಟ್

ಲಾರಿಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ: ಮೂವರು ದುರ್ಮರಣ.

 ಕಾವೇರಿ ನೀರಿಗೆ  ಮತ್ತೆ ಖ್ಯಾತೆ ತೆಗೆದ ತಮಿಳುನಾಡು:  ಪ್ರತಿನಿತ್ಯ 12,500 ಕ್ಯೂಸೆಕ್ ನೀರು ಹರಿಸುವಂತೆ CWRC ಸಭೆಯಲ್ಲಿ  ಬೇಡಿಕೆ