ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಹಮಾಸ್’ ಸಂಪೂರ್ಣ ನಾಶ ಮಾಡ್ತೇವೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಾರ್ನ್!

ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ ತೀವ್ರಗೊಂಡಿದ್ದು,  ಅಪಾರ ಸಾವುನೋವುಗಳು ಸಂಭವಿಸಿದೆ, ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೆ ಯುದ್ಧ ಘೋಷಿಸಿದ ಇಸ್ರೇಲ್ ಗಾಜಾಪಟ್ಟಿಯನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಇದರಿಂದಾಗಿ ಗಾಜಾ ಪ್ರದೇಶದಲ್ಲಿ ಜನರ ವಲಸೆ ಹೆಚ್ಚಾಗಿದೆ. ಈ ನಡುವೆ ಹಮಾಸ್ ವಿರುದ್ಧದ ದಾಳಿ ಇನ್ನಷ್ಟು ತೀವ್ರಗೊಳ್ಳಲಿದ್ದು, ಹಮಾಸ್’ ಸಂಪೂರ್ಣ ನಾಶ ಮಾಡ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ವಿರುದ್ಧದ ಯುದ್ಧ ಸಂಬಂಧ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದ ಅವರು ಬೆಂಜಮಿನ್ ನೆತನ್ಯಾಹು, ಸಭೆಯಲ್ಲಿ ಯುದ್ಧದ ಪರಿಣಾಮಗಳು ಹಾಗೂ ಮುಂದಿನ ನಡೆ ಕುರಿತು ಚರ್ಚೆ ಮಾಡಿದ್ದು, ಹಮಾಸ್ ಸಂಪೂರ್ಣ ನಾಶ ಮಾಡುತ್ತೇವೆ ಎಂದಿದ್ದಾರೆ.

ಟೆಲ್ ಅವೀವ್ ನ ಸೇನಾ ಪ್ರಧಾನ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ 7ರ ದಾಳಿಯಲ್ಲಿ ಹತರಾದ 1,300 ಇಸ್ರೇಲಿಗಳ ನೆನಪಿಗಾಗಿ ಒಂದು ಕ್ಷಣದ ಮೌನಾಚರಣೆ ಮಾಡಲಾಯಿತು. ಕಳೆದ ವಾರ ತನ್ನ ಪಕ್ಷದ ಹಲವಾರು ಸದಸ್ಯರೊಂದಿಗೆ ಸರ್ಕಾರಕ್ಕೆ ಸೇರ್ಪಡೆಗೊಂಡ ಮಾಜಿ ವಿರೋಧ ಪಕ್ಷದ ಶಾಸಕ ಬೆನ್ನಿ ಗ್ಯಾಂಟ್ಜ್ ಅವರನ್ನು ಸ್ವಾಗತಿಸಿದ ನೆತನ್ಯಾಹು, ಎಲ್ಲಾ ಮಂತ್ರಿಗಳು “ಯುನೈಟೆಡ್ ಫ್ರಂಟ್ನೊಂದಿಗೆ ಇಡೀ ದಿನ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.

“ನಾವು ನೆಲಸಮವಾಗುತ್ತೇವೆ ಎಂದು ಹಮಾಸ್ ಭಾವಿಸಿದೆ. ಅದರಂತೆ ನಾವು ಹಮಾಸ್ ಅನ್ನು ನಾಶ ಮಾಡುತ್ತೇವೆ”. ನಮ್ಮ ಒಗ್ಗಟ್ಟು ಶತ್ರು ರಾಷ್ಟ್ರ ಮತ್ತು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ ಎಂದಿದ್ದಾರೆ.

 

Related posts

ಡೀಪ್ ಫೇಕ್: ಕೇಂದ್ರದಿಂದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಿಗೆ 7 ದಿನದ ಗಡುವು..

ಕಾಂಗ್ರೆಸ್ ಸರ್ಕಾರ ಬೀಳಿಸೋಕೆ ಅಲ್ಲಿಕೆ ಹೋಗಿದ್ದೀರಾ..? ಮಾಜಿ ಸಿಎಂ ಹೆಚ್ ಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು.

ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಬಿಜೆಪಿಯವರಿಂದ ಪ್ರತಿಭಟನೆ- ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ.