ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಅ. 28-29 ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟಕ್ಕೆ ಸ್ಕೇಟಿಂಗ್ ಆಯ್ಕೆ ಪ್ರಕ್ರಿಯೆ.

ಶಿವಮೊಗ್ಗ: ಕರ್ನಾಟಕ ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾಪಟುಗಳ ಆಯ್ಕೆಯ ಉದ್ದೇಶದಿಂದ ಬರುವ ಅಕ್ಟೋಬರ್ 28 ಹಾಗೂ 29 ರಂದು  ನಗರದ ಗೋಪಾಳದಲ್ಲಿರುವ  ಕ್ರೀಡಾ ಸಂಕೀರ್ಣದ ಸ್ಕೇಟಿಂಗ್ ಅಂಕಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ್, ಐಎಎಸ್., ಪ್ರಧಾನ ಕಾರ್ಯದರ್ಶಿ ಇಂದೂಧರ್ ಸೀತಾರಾಮ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕೇಟಿಂಗ್ ಕಲಿಯುತ್ತಿರುವ ಹಾಗೂ ಕಲಿತಿರುವ ಕ್ರೀಡಾಪಟುಗಳು ಬಾಗವಹಿಸಬಹುದು.
ಅದಕ್ಕೂ ಪೂರ್ವದಲ್ಲಿ ಕ್ರೀಡಾಪಟುಗಳು ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಆರ್ ಎಸ್ ಎಫ್ ಐ) ದ ನೋಂದಣಿಯನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಅಕ್ಟೋಬರ್ 25 ರ ರೊಳಗೆ ಹೆಸರು ನೋಂದಾಯಿಸಲು ಸೂಚಿಸಲಾಗಿದ್ದು, ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ನೊಂದಾಯಿಸಲು 98455 52007 ( ಇಂದೂಧರ್), 99020 53200 (ಎಂ.ರವಿ)  ಅವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

Related posts

ಬ್ಯಾಂಕಿಂಗ್ ಪರೀಕ್ಷೆಯಲ್ಲಿ  ಕನ್ನಡರಿಗೆ ಅನ್ಯಾಯ: ಕೇಂದ್ರದ ಇಬ್ಬಗೆಯ ನೀತಿಗೆ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ

ಚುನಾವಣಾ ಬಾಂಡ್: ‘ಕಾನೂನುಬದ್ಧ ಲಂಚ: ಮಾಜಿ ಕೇಂದ್ರಸಚಿವ ಚಿದಂಬರಂ ಆರೋಪ

ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ದುಷ್ಕರ್ಮಿಗಳ ಬಂಧಿಸುವಂತೆ ಆಗ್ರಹ,ಪ್ರತಿಭಟನೆ.