ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅ.17 ರ ಮಂಗಳವಾರ ಸಂಜೆ 06:00 ಕ್ಕೆ ಗೋಪಿಶೆಟ್ಟಿಕೊಪ್ಪ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ದಸರಾ ಕಥಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಕಥಾ ಸಂಭ್ರಮವನ್ನು ಹಿರಿಯ ಸಾಹಿತಿ ಪ್ರೊ.ಎಂ.ಬಿ. ನಟರಾಜ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಎಫ್ಎಸ್ ಅಧಿಕಾರಿಗಳಾದ ಮುಕುಂದಚಂದ್ರ, ಚಾಲುಕ್ಯ ನಗರದ ಮುರಳೀಧರ್, ಯುವ ಮುಖಂಡ ಚೇತನ್ ಗೌಡ ಭಾಗವಹಿಸಲಿದ್ದಾರೆ.
ಕಥೆಗಾರರಾದ ಸಿಮ್ಸ್ ಕಾಲೇಜು ವೈದ್ಯರಾದ ಡಾ.ಕೆ.ಎಸ್. ಗಂಗಾಧರ, ಕುವೆಂಪು ವಿ.ವಿ. ಡಾ.ಹಸೀನಾ, ಸಹ್ಯಾದ್ರಿ ಕಾಲೇಜು ಉಪನ್ಯಾಸಕ ಡಾ. ಜಿ.ಆರ್. ಲವ, ನೇತ್ರಾವತಿ ಆಯನೂರು, ಸಿ. ಎಂ. ನೃಪತುಂಗ, ಮೇದಿನಿ ಕೆಸಿನಮನೆ, ಡಿ. ಎಚ್. ಸೂರ್ಯಪ್ರಕಾಶ್, ಸೊರಬದ ರಾಜ್ ಗೋಕಲೆ, ತುರುವನೂರು ಮಲ್ಲಿಕಾರ್ಜುನ, ಭದ್ರಾವತಿ ನಾಗೋಜಿರಾವ್, ಡಾ. ಕೆ. ಜಿ. ವೆಂಕಟೇಶ್, ಪ್ರೊ. ಆಶಾಲತಾ, ಶ್ರೀನಿವಾಸ ನಗಲಾಪುರ ಅವರು ಸಣ್ಣಕಥೆ ಹೇಳುತ್ತಾರೆ.
ಪ್ರೇಕ್ಷಕರು ಕಥೆ ಕೇಳಿ ಅನಿಸಿಕೆ ಹೇಳುವ ಅವಕಾಶವಿದೆ. ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಿ. ಮಂಜುನಾಥ ವಿನಂತಿಸಿದ್ದಾರೆ.