ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಲೋಕಸಭೆ ಚುನಾವಣೆಗೆ ತಯಾರಿ: ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಿ ಹೊಸ ಮುಖಗಳಿಗೆ ಮಣೆ ಹಾಕಲು ಪ್ಲಾನ್.

ಬೆಂಗಳೂರು: ದೇಶದಲ್ಲಿ ಈಗಾಗಲೇ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದ ಚುನಾವಣೆ ಬಳಿಕ  ದೇಶದಲ್ಲಿ ಲೋಕಸಭಾ ಚುನಾವಣೆ  ನಡೆಯಲಿದೆ. ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಆಪರೇಷನ್ ಕಾಂಗ್ರೆಸ್ಗೂ ಕೈ ಹಾಕಿದ್ದು ಕೆಲ ಬಿಜೆಪಿ ಜೆಡಿಎಸ್ ಮುಖಂಡರನ್ನ ತನ್ನತ್ತ ಸೆಳೆಯುತ್ತಿದೆ.

ಈ ಮಧ್ಯೆ ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ಗೆ ಶೀಘ್ರದಲ್ಲೇ ಭರ್ಜರಿ ಸರ್ಜರಿ ಆಗಲಿದೆ. ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಲೊಕಸಭೆಗೂ ಮುನ್ನ ಹೊಸ ಮುಖಗಳಿಗೆ ಮಣೆ ಹಾಕಲು ಎಐಸಿಸಿ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತದೆ.

ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಚಂದ್ರಪ್ಪ, ಈಶ್ವರ್ ಖಂಡ್ರೆಗೆ ರಿಲೀವ್ ಸಿಗಲಿದೆ. ಇನ್ನು ಎಐಸಿಸಿ, ರಾಜ್ಯ ಘಟಕದಿಂದಲೂ ಪರ್ಯಾಯ ಹೆಸರು ಕೇಳಿದೆ. ರಾಜ್ಯ ಕಾಂಗ್ರೆಸ್ ಘಟಕ ಜಾತಿ ಸಮೀಕರಣಕ್ಕೆ ಮಣೆ ಹಾಕುತ್ತಿದೆ. ಕೆಪಿಸಿಸಿ ಹೊಸ ಕಾರ್ಯಧ್ಯಕ್ಷರ ಸ್ಥಾನಕ್ಕೆ ನಾಲ್ವರ ಹೆಸರು ಶಿಫಾರಸ್ಸು ಮಾಡಿದೆ. ಜಿ.ಸಿ.ಚಂದ್ರಶೇಖರ್, ಅಂಜಲಿ ನಿಂಬಾಳ್ಕರ್, ವಿನಯ್ ಕುಲಕರ್ಣಿ, ವಸಂತ ಕುಮಾರ್, ವಿನಯ್ ಕುಮಾರ್ ಸೊರಕೆ ಹೆಸರು ಕಳಿಸಿದೆ.

ಇನ್ನು ಒಕ್ಕಲಿಗ ಸಮುದಾಯದಿಂದ ಜಿ.ಸಿ.ಚಂದ್ರಶೇಖರ್, ಮಹಿಳಾ ಕೋಟದಡಿ ಅಂಜಲಿ ನಿಂಬಾಳ್ಕರ್, ಲಿಂಗಾಯಿತ ಕೋಟದಡಿ ವಿನಯ್ ಕುಲಕರ್ಣಿ, ಈಡಿಗ ಸಮುದಾಯದಿಂದ ವಿನಯ್ ಕುಮಾರ್ ಸೊರಕೆ, ದಲಿತ ಎಡಗೈ ಸಮುದಾಯದಿಂದ ವಸಂತ್ ಕುಮಾರ್ ಹೆಸರನ್ನು ಕೆಪಿಸಿಸಿ ಶಿಫಾರಸ್ಸು ಮಾಡಿದೆ. ಹಾಘೂ ಮುಸ್ಲಿಂ ಸಮುದಾಯದಿಂದ ಸಲಿಂ ಅಹಮದ್ ಕಾರ್ಯಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸಚಿವ ಚಲುವರಾಯಸ್ವಾಮಿ ಪತ್ನಿ ನಿಲ್ಲಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಮಂಡ್ಯ ಕಾಂಗ್ರೆಸ್ ರವಿಕುಮಾರ್ ಗೌಡ, ಮತ್ತೊಂದು ಮಹಿಳಾ ಅಭ್ಯರ್ಥಿಯ ಹೆಸರನ್ನು ಮುಂದಿಟ್ಟಿದ್ದಾರೆ. ಶಾಸಕ ರವಿಕುಮಾರ್ ಗೌಡ ಅವರು, ಮಾಜಿ ಸಿಎಂ ಎಸ್ಎಂ ಕೃಷ್ಣ ಪುತ್ರಿ ಶಾಂಭವಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಎಸ್ಎಂ ಕೃಷ್ಣ ಪುತ್ರಿ ಶಾಂಭವಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ರವಿಕುಮಾರ್ ಗೌಡ ಆಗ್ರಹಿಸಿದ್ದಾರೆ. ನಾವು ಎಂಪಿ ಚುನಾವಣೆ ಗೆಲ್ಲಬೇಕಿದೆ. ಎಸ್ಎಂಕೆ ಪುತ್ರಿ ಶಾಂಭವಿ ಅಥವಾ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ ಅವರಿಗೆ ಟಿಕೆಟ್ ನೀಡಲಿ ಎಂದಿದ್ದರು.

 

Related posts

ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ 94ನೇ ವರ್ಷದ ಶ್ರೀ ವಿನಾಯಕೋತ್ಸವ: 21 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.

10 ರಿಂದ 15 ಮಾಜಿ ಮತ್ತು ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧ- ಕೃಷಿ ಸಚಿವ ಚಲುವರಾಯಸ್ವಾಮಿ ಹೊಸ ಬಾಂಬ್.

ಸರ್ಕಾರ ಪರಿಹಾರದ ಬಗ್ಗೆ ಗಮನಹರಿಸದೆ ಇತರೆ ವಿಷಯಗಳಲ್ಲಿ ಸಮಯ ಕಳೆಯುತ್ತಿದೆ-ಸಂಸದ ಬಿ.ವೈ. ರಾಘವೇಂದ್ರ