ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಐವರು ಶಸ್ತ್ರಸಜ್ಜಿತ ಉಗ್ರರನ್ನು ಹತ್ಯೆಗೈದು ಸಾಹಸ ಮೆರೆದ ಓರ್ವ ಯುವತಿ..

ಇಸ್ರೇಲ್:  ಕಳೆದ ಒಂದು ವಾರದಿಂದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಭಾರೀ ಕಾಳಗ ನಡೆಯುತ್ತಿದ್ದು ಈ ಯುದ್ಧದಲ್ಲಿ ಸಾವಿರಾರು ಮಂದಿ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಹಮಾಸ್ ಉಗ್ರರು ಸಾವಿರಾರು ರಾಕೆಟ್ ಗಳನ್ನು ಇಸ್ರೇಲ್ ಗೆ ಹಾರಿಸುವ ಮೂಲಕ ಯುದ್ಧ ಆರಂಭಿಸಿದ್ದು  . ವಾಯು, ಭೂ ಹಾಗೂ ಸಮುದ್ರ ಮಾರ್ಗವಾಗಿ ಸಾವಿರಾರು ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಹಮಾಸ್ ಉಗ್ರರಿಗೆ ತಕ್ಕ ತಿರುಗೇಟು ನೀಡಿರುವ ಇಸ್ರೇಲ್ ಕೂಡ ಭೀಕರ ದಾಳಿ ನಡೆಸಿ ಸಾವಿರಕ್ಕೂ ಹೆಚ್ಚು ಮಂದಿ ಪ್ಯಾಲಸ್ತೈನ್ ರನ್ನ ಕೊಂದಿದೆ. ಈ ಮಧ್ಯೆ ಹೋರಾಟ ನಡೆಸುತ್ತಿರುವ ಇಸ್ರೇಲ್ ಜನರ ಸಾಹಸಗಾಥೆಗಳು ಒಂದೊಂದಾಗಿ ಹೊರಬರುತ್ತಿವೆ.

25 ವರ್ಷದ ಯುವತಿಯೊಬ್ಬಳು ಕೆಚ್ಚೆದೆಯಿಂದ ಹೋರಾಡಿ ಐವರು ಶಸ್ತ್ರಸಜ್ಜಿತ ಹಮಾಸ್ ಉಗ್ರರನ್ನು  ಕೊಂದು ಸಾಹಸ ಮೆರೆದಿದ್ದಾಳೆ. ಹಮಾಸ್ ಉಗ್ರರ ಉಪಟಳವನ್ನು ತಡೆದು ಕಿಬ್ಬುಟ್ಜ್ ಸಮುದಾಯದ ( ಕೃಷಿಯಲ್ಲಿ ತೊಡಗಿಕೊಂಡಿರುವ ರೈತ ಸಮೂಹ ) ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಕೊನೆಯ ಹಂತದ ರಕ್ಷಣೆಯಲ್ಲಿ ಕಿಬ್ಬುಟ್ಜ್ ನಿವಾಸಿಗಳನ್ನು ಮುನ್ನಡೆಸಿದ ಆಕೆಯ ಸಾಹಸವು ಎಲ್ಲರಿಗೂ ಮಾದರಿ ಎಂದು ಹೇಳಲಾಗುತ್ತಿದೆ. 25 ವರ್ಷ ವಯಸ್ಸಿನ ಇನ್ಬಾರ್ ಲೈಬರ್ಮನ್ ಎಂಬ ಯುವತಿ ಆಮ್ನ ಭದ್ರತಾ ಮುಖ್ಯಸ್ಥೆಯಾಗಿದ್ದಾಳೆ. ಹಮಾಸ್ ದಾಳಿಯನ್ನು ಹಿಮ್ಮೆಟ್ಟಿಸಿ ದಾಳಿಕೋರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ.

ಕಿಬ್ಬುಟ್ಜ್ ಜನರು ವಾಸಿಸುವ ಪ್ರದೇಶವನ್ನು ರಕ್ಷಿಸಲು 12 ಯುವಕರನ್ನು ತಕ್ಷಣವೇ ನೇಮಿಸಿಕೊಂಡ ಲೈಬರ್ಮನ್ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾಳೆ. ಯುವಕರ ಗುಂಪನ್ನು ಮುನ್ನೆಡಿಸಿದ ಆಕೆ ಐವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ವರದಿಯಾಗಿದೆ.

ಕಿಬ್ಬುಟ್ಜ್ ಜನರು ವಾಸಿಸುವ ನಿರ್ ಆಮ್ ಪ್ರದೇಶವು ಗಾಜಾದಿಂದ ಕೇವಲ ಒಂದು ಮೈಲಿ ದೂರದಲ್ಲಿದೆ. ಅಕ್ಟೋಬರ್ 7 ರಂದು ಶಸ್ತ್ರಸಜ್ಜಿತ ಭಯೋತ್ಪಾದಕರಿಂದ ಭಾರೀ ದಾಳಿಗೆ ಒಳಗಾಗಿದೆ. ಆದರೆ, ಲೈಬರ್ಮನ್ ಅವರ ಸಾಹಸದಿಂದ ಅಲ್ಲಿನ ಜನರು ಬದುಕಿ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ಬಾರ್ ಲೈಬರ್ಮನ್ ಅವರ ಸಾಹಸಗಾಥೆಯು ಹೊರಬೀಳುತ್ತಿದ್ದಂತೆ ಆಕೆಯನ್ನು ಹೊಗಳಿ ಸಾಮಾಜಿಕ ಮಾಧ್ಯಮಗಳಲ್ಲಿ ಪೊಸ್ಟ್ ಮಾಡಲಾಗುತ್ತಿದೆ. ಇಸ್ರೇಲ್ ಸರ್ಕಾರ ಆಕೆಯನ್ನು ಗೌರವಿಸಬೇಕೆಂದು ಒತ್ತಾಯಿಸಲಾಗಿದೆ.

‘ಆಕೆಯ ವೀರಗಾಥೆಯು ಇಸ್ರೇಲಿ ಪುರಾಣಗಳಲ್ಲಿ ಉಳಿಯಲಿದೆ. ಇದು ತಲೆಮಾರುಗಳವರೆಗೆ ಸ್ಮರಿಸುವಂತಹ ಕಥೆಯಾಗಿದೆ’ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಹೇಳಿದ್ದಾರೆ.

 

Related posts

ಪ್ರತಿಯೊಬ್ಬರೂ ಆರೋಗ್ಯ ಜಾಗೃತಿಗೆ ಆದ್ಯತೆ ನೀಡುವುದು ಅವಶ್ಯಕ-ಬಿಂದು ವಿಜಯ್‌ಕುಮಾರ್

ಬಿವೈ ವಿಜಯೇಂದ್ರರನ್ನ ಅಳೆದು ತೂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ- ಅರವಿಂದ ಲಿಂಬಾವಳಿ.

ಶಿವಮೊಗ್ಗ ದಸರಾಗೆ ಸರ್ಕಾರ ಕೂಡಲೇ ಒಂದು ಕೋಟಿ ರೂ. ಅನುದಾನ ನೀಡಬೇಕು-ಕೆ.ಬಿ. ಪ್ರಸನ್ನಕುಮಾರ್ ಆಗ್ರಹ