ಶಿವಮೊಗ್ಗ: ನಗರ ದೇವಾಂಗ ಸಮಾಜ ಶಿವಮೊಗ್ಗದ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿ ಬಿ.ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. 2023 ಅಕ್ಟೋಬರ್ 8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಸತೀಶ್ ಕುಮಾರ್ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.
ನಗರ ದೇವಾಂಗ ಸಮಾಜ ಶಿವಮೊಗ್ಗ ಸಂಘದ ಎರಡನೇ ಬಾರಿಗೆ ಬಿ.ಸತೀಶ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಮಪ್ಪ ಯು ರಾಂಪುರ, ಕೆ ಜಿ ಲೋಕೇಶ್, ಕಾರ್ಯದರ್ಶಿಯಾಗಿ ಡಿ ಪರಶುರಾಮಪ್ಪ ಹಾಗೂ ಖಜಾಂಚಿಯಾಗಿ ಟಿ ಆರ್ ಮಂಜುನಾಥ ಶಿವನಿ, ಸಹ ಕಾರ್ಯದರ್ಶಿಯಾಗಿ ಬಿ ಸಿ ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಡಿ ನಾಗರಾಜಪ್ಪ ಹಾಗೂ ಶಾಂತ ವೆಂಕೋಬ ಆಯ್ಕೆಯಾಗಿದ್ದಾರೆ.
ಎಂ ಗುರುಶಾಂತಪ್ಪ, ಹಾಲೇಶಪ್ಪ ಎಚ್.ಎಸ್., ಬಿ.ಗೋಪಿನಾಥ್, ಕಾಂತರಾಜ್, ಎಚ್ ಎಚ್ ಕಮಲಾಕ್ಷಪ್ಪ , ಡಿ ಮಂಜಪ್ಪ, ಕುಮಾರ್ ರಾಂಪುರ, ಡಿ ಟಿ ವೆಂಕಟೇಶ್, ಡಿ.ಭೋಜರಾಜ್, ಡಿ ನರಸಿಂಹಪ್ಪ, ಎಸ್ ಎನ್ ನಿರಂಜನ್, ಎಸ್.ಎಸ್.ಶಿವಾನಂದ ಸ್ವಾಮಿ, ಎಂ ವಾಸುದೇವಪ್ಪ, ಬಿ ಎಂ ಶಂಕರಯ್ಯ, ಚಂದ್ರಶೇಖರ್, ಎಸ್ ಆರ್ ಪ್ರಕಾಶ್, ಬಿ ಪ್ರೇಮಾ ಗಿರಿಯಪ್ಪ ಇವರುಗಳು ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.