ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಕಾಡು, ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬರ ಸಾಂವಿಧಾನಿಕಕರ್ತವ್ಯ: ಪಟಗಾರ್

ಶಿವಮೊಗ್ಗ: ವನ್ಯಜೀವಿಗಳ ಆವಾಸಸ್ಥಾನವಾದ ಕಾಡುಗಳು ಶುದ್ಧಗಾಳಿ, ನೀರು, ವಾತಾವರಣದ ಉಷ್ಣಾಂಶ ನಿಯಂತ್ರಣ ಸೇರಿದಂತೆ ಮಾನವನ ಹಲವು ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿರುವ ಮೂಲಗಳು. ಹೀಗಾಗಿ ಕಾಡು ಮತ್ತು ವನ್ಯಮೃಗಗಳ ರಕ್ಷಣೆ ಪ್ರತಿಯೊಬ್ಬ ನಾಗರೀಕನಕರ್ತವ್ಯವಾಗಿರುತ್ತದೆಎಂದು ಸಂವಿಧಾನ ಸ್ಪಷ್ಟಪಡಿಸಿರುವುದನ್ನು ನಾವೆಲ್ಲರೂ ನೆನಪಿನಲ್ಲಿಡಬೇಕುಎಂದು ಶಿವಮೊಗ್ಗ ವನ್ಯಜೀವಿ ವಲಯದಅರಣ್ಯಉಪಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್‍ಅಭಿಪ್ರಾಯಪಟ್ಟರು.

69ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಶಿವಮೊಗ್ಗದ ಉಳಿವು ಫೌಂಡೇಷನ್ (ರಿ). ಮತ್ತು ಶಿವಮೊಗ್ಗ ವನ್ಯಜೀವಿ ವಿಭಾಗಗಳು ಜಂಟಿಯಾಗಿ ಭಾನುವಾರ ಶೆಟ್ಟಿಹಳ್ಳಿ ಸಂರಕ್ಷಿತಅರಣ್ಯದಲ್ಲಿ ಆಯೋಜಿಸಿದ್ದ ‘ವನ್ಯಜೀವಿಗಳತ್ತ ನಮ್ಮ ನಡಿಗೆ’ಗೆ ಚಾಲನೆ ನೀಡಿಅವರು ಮಾತನಾಡಿದರು. ಅರಣ್ಯಗಳ ರಕ್ಷಣೆಯಿಂದ ಮಾತ್ರವೇ ವನ್ಯಜೀವಿಗಳ ವೃದ್ಧಿ ಸಾಧ್ಯ. ಅದು ಪರಿಸರ ಸಮತೋಲನದಲ್ಲಿ ಮುಖ್ಯ ಪಾತ್ರ ವಹಿಸಲಿದೆಎಂದು ತಿಳಿಸಿದರು.

ವನ್ಯಜೀವಿಗಳ ರಕ್ಷಣೆಯಿಂದ ಕಾಡುಗಳ ಉಳಿವು ಸಾಧ್ಯವಾಗಲಿದೆ. ಅರಣ್ಯ ಪ್ರದೇಶಗಳಿಂದ ಹೆಚ್ಚು ಮಳೆ, ಆಕ್ಸಿಜನ್‍ದೊರೆಯಲಿದ್ದು, ನದಿಗಳಿಗೆ ಜೀವ ಬರಲಿದೆ. ವಾತಾವರಣದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ. ಅರಣ್ಯಗಳು ಮನುಷ್ಯನಉತ್ತಮ ಬದುಕಿಗೆಅವಶ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುತ್ತಿರುವ ಬಹುಮುಖ್ಯ ಮೂಲವಾಗಿವೆ. ಕಾಯಿದೆ ಪ್ರಕಾರ ಶೇ. 32ರಷ್ಟು ಭೂಭಾಗದಲ್ಲಿಕಾಡುಇರಬೇಕುಆದರೆ ಶೇ. 21 ರಷ್ಟು ಮಾತ್ರಕಾಡುಇದೆ. ಇದರ ವೃದ್ಧಿ ನಮ್ಮೆಲ್ಲರ ಹೊಣೆಎಂದು ಹೇಳಿದರು.

ಬೆಳಿಗ್ಗೆ 6.30 ಗಂಟೆಗೆಆರಂಭವಾದ ನಡಿಗೆಯಲ್ಲಿ ಪಕ್ಷಿಗಳ ಗುರುತಿಸುವಿಕೆ-ವೀಕ್ಷಣೆ, ಮಾಹಿತಿ ಹಂಚಿಕೆ, ಕಾಡಿನ ವಿವಿಧಜಾತಿಯ ಸಸ್ಯ-ಮರಗಳು, ಪ್ರಾಣಿಗಳ ಚಲನವಲನ, ಅರಣ್ಯ ಸಂರಕ್ಷಣೆಯ ಕ್ರಮಗಳ ಬಗ್ಗೆ ತಿಳಿಸಲಾಯಿತು. ಅರಣ್ಯ ಸಿಬ್ಬಂದಿಗಳ ಸವಾಲುಗಳಾದ ಕಾಡ್ಗಿಚ್ಚು ನಿಯಂತ್ರಣ, ಬೇಟೆತಡೆ, ಮರಗಳ ಕಳ್ಳಸಾಗಾಣೆ ತಡೆಯ ಬಗ್ಗೆ ಮಾಹಿತಿ ಹಂಚಿಕೊಂಡು ಸಂವಾದ ನಡೆಸಲಾಯಿತು. ಅರಣ್ಯ ಸಂರಕ್ಷಣೆ-ವೃದ್ಧಿಗಾಗಿ ಇಲಾಖೆಯು ಕೈಗೊಳ್ಳುವ ಕ್ರಮಗಳು, ಕಾಯಿದೆಗಳು, ಕಾರ್ಯಕ್ರಮ ಹಾಗೂ ಉಪಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಾರ್ವಜನಿಕರುಅರಣ್ಯ, ವನ್ಯಜೀವಿ ಸಂರಕ್ಷಣೆ, ಪರಿಸರ ಉಳಿಸುವಿಕೆಗಾಗಿ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ನಡಿಗೆಕಾರ್ಯಕ್ರಮದಲ್ಲಿ ಕುವೆಂಪು ವಿವಿ, ಸಹ್ಯಾದ್ರಿಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವಒಟ್ಟು 24 ಪರಿಸರ ಪ್ರಿಯರು ಪಾಲ್ಗೊಂಡಿದ್ದರು. ಉಳಿವು ಫೌಂಡೇಷನ್‍ನಅಧ್ಯಕ್ಷೆಡಾ. ಸೀಮಾ ಎಸ್‍ಆರ್ ಹಾಗೂ ಕಾರ್ಯದರ್ಶಿ ಮತ್ತುಉಪನ್ಯಾಸಕಿ ಪ್ರೇಮಾ ನಡಿಗೆ ಆಯೋಜಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವೈಲ್ಡ್‍ಆಕ್ಟ್ಸ್ ಸಂಸ್ಥೆಯ ವಿನಾಯಕ್ ಭಟ್ ಹಾಗೂ ಕುಮಾರ್‍ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಲಯಅರಣ್ಯಧಿಕಾರಿ ಪ್ರದೀಪ್ ಹಾಲಬಾವಿ, ಸಲೀಂ, ಚನ್ನಬಸಪ್ಪ ಹಾಗೂ ಇತರೆ ಸಿಬ್ಬಂದಿ ಮಾರ್ಗದರ್ಶನ ಮಾಡಿದರು.

Related posts

ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರ ಬಿಡುಗಡೆ.

ಶಾಲಾ ಪಠ್ಯದಲ್ಲಿ ಇಂಡಿಯಾ ಬದಲು ‘ಭಾರತ್’ ಬಳಸಲು ಶಿಫಾರಸ್ಸು

ಬಾರ್ ಅಂಡ್ ರೆಸ್ಟೋರೆಂಟ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ.