ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಶಿರಾಳಕೊಪ್ಪದ ಮದ್ಯವ್ಯರ್ಜನ ಶಿಬಿರಕ್ಕೆ ಮುಂದಾದ‌ ಲಯನ್ಸ್, ಒಂದೊಳ್ಳೆ ಕಾರ್ಯಕ್ರಮ

ಶಿರಾಳಕೊಪ್ಪ,: ಇಲ್ಲಿನ ಶ್ರೀ ಚನ್ನಬಸವೇಶ್ವರ ಸಮುದಾಯ ಭವನ ಬಸವನಂದಿಹಳ್ಳಿಯಲ್ಲಿ ಶಿಕಾರಿಪುರ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಲಯನ್ಸ್ ಕ್ಲಬ್ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಧ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಅಧ್ಯಕ್ಷರಾದ ಯೋಗಿರಾಜ್ , ಗೌರವಾಧ್ಯಕ್ಷರಾದ ಗಿರೀಶ್, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶಿವಯೋಗಿ,  ಶಿರಾಳಕೊಪ್ಪ ಉಪನಿರೀಕ್ಷಕ ಮಂಜುನಾಥ್ S.K, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಹೇಮಪ್ಪ, ಧರ್ಮಸ್ಥಳ ಸಂಸ್ಥೆಯ ಮುಖ್ಯಸ್ಥರಾದ ಬಾಬು ನಾಯಕ್ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಿತು. ಅಮಿತಾರವರು ಎಲ್ಲರನ್ನು ಸ್ವಾಗತಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಸಂಘದ ಗಣೇಶ್ ರವರು ಮಾತನಾಡಿ ಈವರೆಗೆ ನಮ್ಮ ಸಂಸ್ಥೆ 1,736 ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು ಮದ್ಯಪಾನಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪಡುತ್ತಿರುವ 40 ವರ್ಷದ ಶ್ರಮದ ಬಗ್ಗೆ ವಿವರಿಸಿದರು.
ಬಾಬು ನಾಯಕ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಸೇವೆಗಳು ಮತ್ತು ಸಂಸ್ಥೆಯ ಜಾಲದ ಬಗ್ಗೆ ಸಂಪೂರ್ಣ ವಿವರ ನೀಡಿದರು. ವೇದಿಕೆಯ ಹಲವು ಗಣ್ಯರು ಮಾತನಾಡಿ ಇದೊಂದು ಅತ್ಯುತ್ತಮ ಸೇವಾ ಕಾರ್ಯಕ್ರಮ. ಒಂದು ಪುಣ್ಯದ ಕೆಲಸ ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಿಬಿರಾರ್ಥಿ ಗಳಲ್ಲಿ ಮನವಿ ಮಾಡಿದರು. ಗೌರವಾಧ್ಯಕ್ಷ ಲಯನ್ ಗಿರೀಶ್ ರವರು ಮಾತನಾಡಿ ಲಯನ್ಸ್ ಸಮಾಜದ ಒಳಿತಿಗಾಗಿ ನಡೆಯುವ ಎಲ್ಲಾ ಸೇವ ಕಾರ್ಯಕ್ರಮಗಳಲ್ಲಿ ಕೈಜೋಡಿಸುತ್ತದೆ . ಆ ನಿಟ್ಟಿನಲ್ಲಿ ಇಂತಹ ಉತ್ತಮ ಕಾರ್ಯಕ್ರಮದಲ್ಲಿ ನಮ್ಮನ್ನು ಸೇರಿಸಿಕೊಂಡ ಆಯೋಜಕರಿಗೆ ಅಭಿನಂದಿಸಿದರು ಮತ್ತು ಲಯನ್ಸ್ ಸದಾ ನಿಮ್ಮೊಂದಿಗೆ ಇದೆ ಎಂದು ಆಶ್ವಾಸನೆ ನೀಡಿದರು. ಸಮಾರಂಭದ ಅಧ್ಯಕ್ಷರಾದ ಯೋಗಿರಾಜ್ ರವರು ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರತಿಯೊಂದು ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸಿ ಶಿಬಿರ ಆಯೋಜಿಸಿದೆ. ಮುಂದಿನ ಎಂಟು ದಿನಗಳ ಈ ಶಿಬಿರ ನಿಮಗಾಗಿ. ಹಲವಾರು ಸಂಪನ್ಮೂಲದ ವ್ಯಕ್ತಿಗಳು ಚಿಕಿತ್ಸಕರು, ವೈದ್ಯರು, ಭಜನಾ ಮಂಡಳಿಯವರು ಸತತವಾಗಿ ಹಲವಾರು ಕಾರ್ಯಕ್ರಮಗಳೊಂದಿಗೆ  ತಮ್ಮ ಮನಪರಿವರ್ತನೆಗೆ ಶ್ರಮಿಸಲಿದ್ದಾರೆ. ಇದರಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇರುವುದಿಲ್ಲ . ಸಂಪೂರ್ಣ ಶಿಬಿರದ ಖರ್ಚನ್ನು ಎಲ್ಲ ಸಂಘ ಸಂಸ್ಥೆಗಳು ಮಹಿಳಾ ಸಂಘಗಳು ವಹಿಸಿಕೊಂಡಿರುತ್ತಾರೆ. ಅವರ ಕೊಡುಗೆ ಅಭಿನಂದನಾರ್ಹ. ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ .ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು. ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Related posts

ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಸಂಭವನೀಯ ವೇಳಾಪಟ್ಟಿ: ವಿಷಯವಾರು ಅಂತರ ಹೆಚ್ಚಿಸುವಂತೆ ಆಗ್ರಹ.

ಪ್ರೇರಣಾ ಶಕ್ತಿ ವೃದ್ಧಿಸುವ ಸ್ಕೌಟ್ಸ್ ಗೈಡ್ಸ್-ಡಾ. ವಿಷ್ಣುಮೂರ್ತಿ

ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಎಸ್ಪಿ ಜಿ.ಕೆ. ಮಿಥುನ್‍ಕುಮಾರ್ ಚಾಲನೆ.