ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹಲವು ವರ್ಷಗಳಿಂದ ಡಾಂಬರ್ ಕಾಣದ ನವುಲೆ ಇಂದಿರಾ ಗಾಂಧಿ ಬಡಾವಣೆ ರಸ್ತೆ.

ಶಿವಮೊಗ್ಗ: ಬೊಮ್ಮನಕಟ್ಟೆಯಿಂದ ಸೌಳಂಗ ರಸ್ತೆಗೆ ಸೇರುವ ನವುಲೆ ಇಂದಿರಾ ಗಾಂಧಿ ಬಡಾವಣೆ ರಸ್ತೆಯು ಹಲವು ವರ್ಷಗಳಿಂದ ಡಾಂಬರ್ ಕಾಣದೆ ಅಥವಾ ದುರಸ್ತಿ ಕಾಣದೆ ಜನರು ಪರದಾಡುವಂತಾಗಿದೆ. ವಾರ್ಡ್ ಸಂಖ್ಯೆ 2ನ್ನೂ ಹೊಂದಿಕೊಂಡಂತೆ ನವುಲೆ ಇಂದಿರಾಗಾಂಧಿ ಬಡಾವಣೆಯ ಬೊಮ್ಮನಕಟ್ಟೆ ರಸ್ತೆಯಿಂದ ಜೆಎನ್‍ಎನ್‍ಸಿ ಬಳಿಯ ಸೌಳಂಗ ರಸ್ತೆಗೆ ಸಂಪರ್ಕ ರಸ್ತೆಯಿದ್ದು, ಹಲವಾರು ವರ್ಷಗಳಿಂದ ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಬೊಮ್ಮನಕಟ್ಟೆಯಿಂದ ಈ ಭಾಗದವರೆಗೆ ಹಲವು ಬಡಾವಣೆಗಳು ಹೊಸದಾಗಿ ನಿರ್ಮಾಣಗೊಂಡಿದ್ದು, ಇರುವ ಈ ಏಕೈಕ ರಸ್ತೆಯ ಮೂಲಕವೇ ವಾಹನಗಳು ಮತ್ತು ಜನರು ಸಾಗಬೇಕಾಗಿದೆ. ಇಡೀ ರಸ್ತೆ ಗುಂಡಿ ಮತ್ತು ಮಣ್ಣಿನಿಂದ ತುಂಬಿ ಹೋಗಿದೆ. ಹಲವು ಬಾರಿ ಇಲ್ಲಿನ ನಿವಾಸಿಗಳು ಹೋರಾಟ ಮಾಡಿದರೂ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ.
ಪಾಲಿಕೆ ಸದಸ್ಯ ವಿಶ್ವಾಸ್ ಈ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ. ಮಹಾನಗರ ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ, ಜಿಲ್ಲಾ ಹೆದ್ದಾರಿಯ ಅಧಿಕಾರಿಗಳಾಗಲಿ ಈ ಬಗ್ಗೆ ಗಮನಹರಿಸುತ್ತಿಲ್ಲ. ಸೌಳಂಗ ರಸ್ತೆಗೆ ಬರಬೇಕೆಂದರೆ ಲಕ್ಷ್ಮೀ ಟಾಕೀಸ್ ಮೂಲಕ ಬರಬೇಕಾಗುತ್ತದೆ. ವಾಹನಗಳ ಒತ್ತಡ ಅಲ್ಲಿ ಹೆಚ್ಚಾಗಿದೆ. ಆದ್ದರಿಂದ ಜನರಿಗೆ ಅನುಕೂಲವಾಗುವಂತೆ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂದು ಅಲ್ಲಿಯವರೆಗೆ ಕೊನೇಪಕ್ಷ ನೀಟಾದ ಮಣ್ಣಿನ ರಸ್ತೆಯನ್ನಾದರೂ ನಿರ್ಮಿಸಿಕೊಡಬೇಕು ಎಂದು ಆ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಯ್ಕೆ: ಸ್ವಾಗತ ಕೋರಿ ಗುರುವಂದನೆ

ಇನ್ಮುಂದೆ ಮೊಬೈಲ್ ನಲ್ಲೇ ಸಿಗುತ್ತೆ ಪ್ರವಾಹದ ಮುನ್ಸೂಚನೆ..

ಏಕದಿನ ವಿಶ್ವಕಪ್ ಗೆ  ಟೀಂ ಇಂಡಿಯಾ ಪ್ರಕಟ:  ಏಕೈಕ ಕನ್ನಡಿಗನಿಗೆ ಸ್ಥಾನ.