ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಮನೆಗೆ ಹೊಸ ಅತಿಥಿ ಕರೆತಂದಿದ್ದಾರೆ. ವಿಶ್ವ ಪ್ರಾಣಿಗಳ ದಿನದಂದು ತಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಸೇರಿಸಿದ್ದಾರೆ. ಈ ನಾಯಿ ಮರಿಯ ಹೆಸರು ನೂರಿ. ನೂರಿಯನ್ನು ತಮ್ಮ ತಾಯಿ ಸೋನಿಯಾಗಾಂಧಿ ಅವರಿಗೆ ರಾಹುಲ್ ಗಾಂಧಿ ಗಿಫ್ಟ್ ಕೊಟ್ಟಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು, ವಿಶ್ವ ಪ್ರಾಣಿ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ಹೊಸ ಕುಟುಂಬ ಸದಸ್ಯರನ್ನ ಸಾಮಾಜಿಕ ಮಾಧ್ಯಮಕ್ಕೆ ಪರಿಚಯಿಸಿದರು. ಆಕೆಯ ಹೆಸರು ನೂರಿ ಇದು ಗೋವಾದಿಂದ ವಿಮಾನದಲ್ಲಿ ಬಂದ ಅವರ ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿದೆ.
ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಗೋವಾ ಪ್ರವಾಸದ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನು ಗೋವಾದಲ್ಲಿ ಕುಟುಂಬವನ್ನ ಭೇಟಿಯಾಗಿದ್ದು, ನಾಯಿ ಮರಿಯನ್ನ ಖರೀದಿಸಿದ್ದಾರೆ. ಸಧ್ಯ ಅದನ್ನ ನವದೆಹಲಿಯ ಮನೆಗೆ ಕರೆತಂದು ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಗೋವಾ ಮೂಲದ ಶ್ವಾನ ಸಾಕಣೆದಾರರಾದ ಶರ್ವಾನಿ ಪಿಟ್ರೆ ಮತ್ತು ಪತಿ ಸ್ಟಾನ್ಲಿ ಬ್ರಾಗಾಂಕಾ ಅವರನ್ನ ರಾಹುಲ್ ಗಾಂಧಿ ಖಾಸಗಿ ಭೇಟಿ ಮಾಡಿದ್ದರು. ಜ್ಯಾಕ್ ರಸೆಲ್ ಟೆರಿಯರ್ ಗಳ ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿ ಅವರ ಕಚೇರಿಯಿಂದ ಕರೆ ಬಂದಿದೆ ಎಂದು ಅವರು ಈ ಹಿಂದೆ ತಿಳಿಸಿದ್ದರು.
ತಮ್ಮ ಮೆಟ್ರೋ ಪ್ರಯಾಣದಲ್ಲಿ ರಾಹುಲ್ ಗಾಂಧಿ ತಮ್ಮ ಸ್ನೇಹಿತನನ್ನು ಹೊಂದಿದ್ದ ಪ್ರಯಾಣಿಕರೊಂದಿಗೆ ವೀಡಿಯೊ ಕರೆಯಲ್ಲಿ ಸಂವಹನ ನಡೆಸಿದರು.
ನಂತರ ರಾಹುಲ್ ಗಾಂಧಿ ಮನೆಗೆ ತಲುಪುತ್ತಿದ್ದಂತೆ, ನೂರಿಯನ್ನ ಹೊರಗೆ ಕರೆದೊಯ್ದು ರಾಹುಲ್, ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೋಡುವಂತೆ ಹೇಳಿದರು. ಆರಂಭದಲ್ಲಿ ಹಿಂಜರಿದ ಸೋನಿಯಾ ಗಾಂಧಿ ನಂತರ ಹೊರಬಂದು, ಉಡುಗೊರೆ ನೋಡಿ, ಖುಷಿಯಿಂದ ನಾಯಿಮರಿಯನ್ನ ಎತ್ತಿಕೊಂಡರು. ನಂತ್ರ “ತುಂಬಾ ಮುದ್ದಾಗಿದ್ದಾಳೆ” ಎಂದ ಸೋನಿಯಾ ಗಾಂಧಿ, ಉಡುಗೊರೆ ನೀಡಿದ ಮಗನಿಗೆ ಧನ್ಯವಾದ ತಿಳಿಸಿದರು.