ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು-ವೈ.ಹೆಚ್. ನಾಗರಾಜ್

ಶಿವಮೊಗ್ಗ: ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಹೇಳಿದರು.
ಅವರು ಇಂದು ಭಾರತ ಸೇವಾದಳದ ಸಹಯೋಗದೊಂದಿಗೆ ಭೂಪಾಳಂ ಸರ್ಕಾರಿ ಶಾಲೆಯಲ್ಲಿ ಅಯೋಜಿಸಿದ್ದ ಗಾಂದಿಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯನ್ನು ಇಡಿ ವಿಶ್ವವೇ ಮೆಚ್ಚಿದೆ. ಅವರ ಸತ್ಯ, ಅಹಿಂಸಾ ತತ್ವಗಳನ್ನು ನಾವು ಪಾಲಿಸಬೇಕಾಗಿದೆ. ನಡೆದಾಡುವ ದೇವರೇ ಅವರಾಗಿದ್ದರು. ಆದರೆ ಇತ್ತೀಚೆಗೆ ಗಾಂಧೀಜಿಯ ಬಗ್ಗೆ ಸಲ್ಲದ ವಿಚಾರಗಳು ಮೂಡುತ್ತಿವೆ. ಅದು ತಪ್ಪು. ಗಾಂಧಿ ಎಂದಿಗೂ ಸತ್ಯ. ಗಾಂಧೀಜಿಯಂತೆ ಲಾಲ್ ಬಹಾದ್ದೂರ್ ಶಾಸ್ತ್ರಿಗಳು ಕೂಡ ಈ ದೇಶದ ಕಣ್ಮಣಿಯಾಗಿದ್ದಾರೆ. ಅವರ ಹುಟ್ಟುಹಬ್ಬವೂ ಇಂದೇ ಆಗಿದೆ. ಇಬ್ಬರ ಆದರ್ಶಗಳನ್ನೂ ನಾವು ಪಾಲಿಸೋಣ ಎಂದ ಅವರು, ಭಾರತ ಸೇವಾದಳವು ಮಹಾಪುರುಷರ ಆದರ್ಶಗಳ ಕಾರ್ಯಕ್ರಗಳನ್ನು ನಡೆಸುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶರಾವತಿ, ಶಿಕ್ಷಕರಾದ ಜಯಶ್ರೀ, ಸ್ನೇಹಾ, ಸೇವಾದಳದ ಕಾರ್ಯದರ್ಶಿ ಪ್ರಸನ್ನ, ಮುತ್ತು ನಾಯಕ್ ಸೇರಿದಂತೆ ಹಲವರಿದ್ದರು.

Related posts

ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸ್ವಾಗತಾರ್ಹ- ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ

ಅಪ್ಪು ಪುಣ್ಯಸ್ಮರಣೆ: ತಮ್ಮನನ್ನು ನೆನದು ಭಾವುಕರಾದ ನಟ ಶಿವಣ್ಣ…

ಇನ್ಮುಂದೆ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಿಲ್ ವ್ಯವಸ್ಥೆ ಜಾರಿ