ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಈದ್ ಮಿಲಾದ್ ಮೆರವಣಿಗೆ  ವೇಳೆ ಗಲಾಟೆ ಪ್ರಕರಣ: 40ಕ್ಕೂ ಹೆಚ್ಚು ಜನರು ಪೊಲೀಸರ ವಶಕ್ಕೆ..

ಬೆಂಗಳೂರು,:  ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ,  ಸುಮಾರು 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ  ಸಿಎಂ ಸಿದ್ಧರಾಮಯ್ಯ, ಮೆರವಣಿಗೆ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಪೊಲೀಸರು, ಮನೆಗಳ ಮೇಲೆ ಕಲ್ಲು ತೂರಿದ್ದವರನ್ನು ಬಂಧಿಸಲಾಗಿದೆ. ಒಂದು ಧರ್ಮದವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದರು.

ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ನಮ್ಮ‌ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಇಂತಹ ಕೃತ್ಯ ಎಸಗುವವರನ್ನ ಸಹಿಸುವುದಿಲ್ಲ. ಹೀಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ  ಮನವಿ ಮಾಡುವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

Related posts

ಮಾಡುವ ಕೆಲಸದಲ್ಲಿ ದೈವತ್ವವನ್ನು ಕಂಡ ಸಂಸ್ಕೃತಿ-ಜ್ಞಾನರಶ್ಮಿ ಮುಖ್ಯಸ್ಥ ನಂದಕುಮಾರ್ ಅಭಿಮತ

ಸೇವಾ ಕಾರ್ಯದಲ್ಲಿ ಕೈಜೋಡಿಸಲು ದೇಣಿಗೆ ಸಹಕಾರ ಮುಖ್ಯ-ಕೆ.ರವಿ ಕೋಟೋಜಿ

ಮಕ್ಕಳು ಚೆನ್ನಾಗಿ ನೋಡಿಕೊಳ್ಳದಿದ್ರೆ ಪೋಷಕರು ಆಸ್ತಿಗಳನ್ನು ಮರಳಿ ಪಡೆಯಲು ಅವಕಾಶ-ಹೈಕೋರ್ಟ್‌ ತೀರ್ಪು..