ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಇನ್ನ ತಿಂಗಳು ಬಾಕಿ: ಶೀಘ್ರದಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಗುತ್ತಾ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರರಿಗೆ ಶೀಘ್ರದಲ್ಲೇ ವೇತನ ಹೆಚ್ಚಳದ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ.  ವೇತನ ಪರಿಷ್ಕರಣೆ ಕುರಿತಾಗಿ 7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ಒಂದು ತಿಂಗಳು ಬಾಕಿ ಉಳಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇತನ ಆಯೋಗದ ಅಧ್ಯಕ್ಷರು, ಸದಸ್ಯರೊಂದಿಗೆ  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.  ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ 7ನೇ ವೇತನ ಆಯೋಗವನ್ನು ನವೆಂಬರ್ ನಲ್ಲಿ ರಚಿಸಿದ್ದು,  ಆರು ತಿಂಗಳ ಒಳಗೆ ಆಯೋಗ ತನ್ನ ವರದಿ ನೀಡಬೇಕಿತ್ತು. ಆದರೆ ಮೇನಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ  ಬಳಿಕ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿದ್ದು, ವರದಿ ಸಲ್ಲಿಕೆಗೆ ಒಂದು ತಿಂಗಳು ಬಾಕಿ ಇದ್ದು, ಆಯೋಗದ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಶಿಫಾರಸ್ಸು ವರದಿ ಸಲ್ಲಿಸುವ ಮೊದಲು ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳು 7ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಸವಾಲು ಎದುರಿಸುತ್ತಿದೆ. ನೌಕರರ ವೇತನ ಪರಿಷ್ಕರಿಸಿದಲ್ಲಿ ಆಗಬಹುದಾದ ಆರ್ಥಿಕ ಹೊರೆ ನಿರ್ವಹಿಸಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಲಾಗಿದೆ. ವೇತನ ಪರಿಷ್ಕರಣಿಗೆ ವಾರ್ಷಿಕ 12 ಸಾವಿರ ಕೋಟಿ ರೂ. ನಿಂದ 18,000 ಕೋಟಿ ರೂ. ಅಗತ್ಯವಿದೆ ಎನ್ನಲಾಗಿದೆ.

 

Related posts

18 ದಿನಗಳ ಕಾಲ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ CWRC ಆದೇಶ.

ರಾಜ್ಯ ಸರ್ಕಾರದಿಂದ ಬರ ಪರಿಹಾರ ರಿಲೀಸ್; ಯಾವ ಜಿಲ್ಲೆಗೆ ಎಷ್ಟೆಷ್ಟು ಪರಿಹಾರ….?

ಅತಿಥಿ ಉಪನ್ಯಾಸಕರ ಬೇಡಿಕೆ ಸರ್ಕಾರ ಪರಿಗಣಿಸುವ ವಿಶ್ವಾಸವಿದೆ-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್.