ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಣೆ.

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಶೇಕಡ 24.1 ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಡ ಕುಟುಂಬದ ಮನೆಗಳಿಗೆ ಸೋಲಾರ್ ದೀಪ ವಿತರಿಸುತ್ತಿದ್ದು, ಇದರ ಅಂಗವಾಗಿ ಇಂದು ವಾರ್ಡ್ ನಂಬರ್ 4ರ ಶಾಂತಿನಗರದ ಫಲಾನುಭವಿಗಳಿಗೆ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಸೋಲಾರ್ ದೀಪಗಳನ್ನು ವಿತರಿಸಿದರು.
ಸೋಲಾರ್ ದೀಪ ಅಂದರೆ ಒಂದು ಸೋಲಾರ್ ಪ್ಯಾನೆಲ್, ಚಾರ್ಜರ್ ಹಾಗೂ ಮೂರು ಲೈಟ್ ಗಳನ್ನು ಒಳಗೊಂಡಿದ್ದು, ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುವ ಸೋಲಾರ್ ಲೈಟ್ ಇದಾಗಿರುತ್ತದೆ. 13 ಫಲಾನುಭವಿಗಳಿಗೆ ಸುಮಾರು 1,30.000 ರೂ. ಬೆಲೆಯ ಸೋಲಾರ್ ಲೈಟ್ ಗಳನ್ನು ವಿತರಿಸಿದರು.
ಅರ್ಹ ಫಲಾನುಭವಿಗಳು ಮೇಲಿನ ದಾಖಲೆಗಳು ನೀಡಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಸೋಲಾರ್ ಲೈಟ್ ಅನ್ನು ಪಡೆದುಕೊಳ್ಳಿ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಹೆಚ್.ಎಂ. ಮಹದೇವ್, , ಮಹಾನಗರ ಪಾಲಿಕೆ ಅಧಿಕಾರಿಗಳಾದ ಲೋಕೇಶಪ್ಪ, ರೇಣು, ಪ್ರದೀಪ್ ಹಾಗೂ ಸುದೀಪ್ ಉಪಸ್ಥಿತರಿದ್ದರು.

Related posts

ಆ.25ರ ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರದಿಂದ ಮಹಿಳೆಯರಿಗೆ ಗಿಫ್ಟ್.

ರಾಜಸ್ಥಾನ ವಿಧಾನಸಭೆ ಚುನಾವಣೆ ಗೆಲ್ಲಲು ‘ಕೈ’ ತಂತ್ರ: 80 ಶಾಸಕರಿಗೆ ಕೋಕ್ ಕೊಡಲು ಪ್ಲಾನ್.

ತುಂಗಾ ಜಲಾಶಯ ಬಳಿ ಯುವಕ ನೀರು ಪಾಲು.