ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಹಿಂದೂ ಮಹಾಸಭಾ ಗಣೇಶ ರಾಜಬೀದಿ ಉತ್ಸವ ಶಾಂತಿಯುತವಾಗಿ ನಡೆಯಲು ಎಲ್ಲಾ ರೀತಿಯ ಬಂದೋಬಸ್ತ್- ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ: ನಾಳೆ ನಡೆಯಲಿರುವ ಹಿಂದೂ ಮಹಾಸಭಾ ಗಣೇಶನ ರಾಜಬೀದಿ ಉತ್ಸವ ಶಾಂತಿಯುತವಾಗಿ ನೆರವೇರಲು ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ಸಂಬಂಧಿಸಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕಿಡಿಗೇಡಿ ಕೃತ್ಯ ನಡೆಸುವ ಶಂಕೆ ಇರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಬಂದೋಬಸ್ತ್‍ಗಾಗಿ 05 ಮಂದಿ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. 14 ಡಿವೈಎಸ್‍ಪಿ, 40 ಇನ್ಸ್‍ಪೆಕ್ಟರ್, 75 ಪಿಎಸ್‍ಐ, ಹೆಡ್ ಕಾನ್ಸ್‍ಟೇಬಲ್ ಮತ್ತು ಹೋಮ್ ಗಾರ್ಡ್ ಸೇರಿ 2500 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಜೊತೆಗೆ 02 ಕೆಎಸ್‍ಆರ್‍ಪಿ, 02 ಆರ್‍ಎಎಫ್ ಹಾಗೂ 10 ಡಿಎಆರ್ ತುಕಡಿಗಳನ್ನು ಬಂದೋಬಸ್ತ್‍ಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. 3000ಕ್ಕೂ ಅಧಿಕ ಪೆÇಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆಗೆ 400ಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸಲು ಮುಂದೆ ಬಂದಿದ್ದಾರೆ. ಅವರನ್ನು ಕೂಡ ವಿವಿಧÀ ಸ್ಥಳಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಭದ್ರಾವತಿಯ 150 ಮಂದಿ ಸ್ವಯಂ ಸೇವಕರು ಇಲಾಖೆಗೆ ಸಹಾಯ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ 1300 ರೌಡಿ ಶೀಟರ್‍ಗಳು ಇದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ಕೆಲವರು ಊರು ತೊರೆದಿದ್ದಾರೆ. ಇದುವರೆಗೂ ಜೈಲಿನಲ್ಲಿದ್ದು ಹೊರಬಂದಿರುವ ಸುಮಾರು 70ರಿಂದ 80 ಮಂದಿಯನ್ನು ಪುನಃ ವಶಕ್ಕೆ ಪಡೆಯಲಾಗಿದೆ ಎಂದರು.
ಮೆರವಣಿಗೆ ಮೇಲೆ ಸಂಪೂರ್ಣ ನಿಗಾ ಇಡಲು ಈಗಾಗಲೇ 500 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಜೊತೆಗೆ 08 ಡ್ರೋನ್‍ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 100 ಕ್ಯಾಮೆರಾ ಕಣ್ಗಾವಲು ಸಹ ಇರಲಿದೆ ಎಂದು ಮಾಹಿತಿ ನೀಡಿದರು.
ಎಎಸ್‍ಪಿ ಅನಿಲ್‍ಕುಮಾರ್ ಭೂಮರೆಡ್ಡಿ, ಡಿವೈಎಸ್‍ಪಿ ಬಾಲರಾಜ್ ಸುದ್ದಿಗೋಷ್ಟಿಯಲ್ಲಿ ಇದ್ದರು.

Related posts

ಯುವಕರು ವಾರಕ್ಕೆ 70 ಗಂಟೆ ದುಡಿಯಬೇಕು- ಇನ್ಫೋಸಿಸ್ ನಾರಾಯಣಮೂರ್ತಿ ಅವರ ಸಲಹೆಗೆ ವಿಭಿನ್ನ ಪ್ರತಿಕ್ರಿಯೆ..

ಮೈಸೂರು ದಸರಾ ಮಹೋತ್ಸವ:  ಗಜಪಯಣಕ್ಕೆ ವಿದ್ಯುಕ್ತ ಚಾಲನೆ.

ಬೈಕ್ ಹಾಗೂ‌ ಆಟೋ ನಡುವೆ ಅಪಘಾತ:  ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್