ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ನೀರು

ಚಿಕ್ಕಮಗಳೂರು: ಸೆ. ೨೧: ೨೦೨೩-೨೪ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ನೀರನ್ನು ಹರಿಸುವ ಬಗ್ಗೆ ದಿನಾಂಕ: ೦೬-೦೯-೨೦೨೩ ರಂದು ನಡೆದ ೮೩ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಬಲದಂಡೆ ನಾಲೆಗೆ ಸೆಪ್ಟೆಂಬರ್ ೨೬ ರಿಂದ ೧೫ ರವರೆಗೆ ಮತ್ತು ಅಕ್ಟೋಬರ್ ೨೬ ರಿಂದ ನವೆಂಬರ್ ೧೭ ರವರೆಗೆ ಹಾಗೂ ಎಡದಂಡೆ ನಾಲೆಗೆ ಸೆಪ್ಟೆಂಬರ್ ೧೭ ರಿಂದ  ಅಕ್ಟೋಬರ್ ೦೧ ರವರೆಗೆ, ಅಕ್ಟೋಬರ್ ೧೨ ರಿಂದ ೨೬ ರವರೆಗೆ, ನವೆಂಬರ್ ೦೬ ರಿಂದ ೧೭ ರವರೆಗೆ ನೀರು ಹರಿಸುವಂತೆ ಅಧಿಸೂಚನೆ ಹೊರಡಿಸಿ ನೀರನ್ನು ಹರಿಸಲಾಗುತ್ತದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ೨೦೨೩-೨೪ನೇ ಸಾಲಿನ ಭದ್ರಾ ಯೋಜನೆಯ ಮುಂಗಾರು ಅವಧಿಯಲ್ಲಿನ ಅರೆ ನೀರಾವರಿ ಬೆಳೆಗಳಿಗೆ ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರನ್ನು ಹರಿಸಲಾಗುವುದು. ಭದ್ರಾ ಅಚ್ಚುಕಟ್ಟಿನಲ್ಲಿ ಬರುವ ಎಲ್ಲಾ ರೈತ ಬಾಂಧವರು ಸಹಕರಿಸುವಂತೆ ಭದ್ರಾ ಯೋಜನಾ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

1ನೇ ವಾರ್ಡ್‍ನಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ: ಕೂಡಲೇ ಕ್ರಮಕ್ಕೆ ಆಗ್ರಹ.

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರು ಆರೋಪಿಗಳ ಬಂಧನ.

ವೀರಯೋಧ ಪ್ರಾಂಜಲ್‌ ಗೆ ನುಡಿನಮನ