ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸ್ವಾಗತಾರ್ಹ- ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ

ಶಿವಮೊಗ್ಗ: ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ಸ್ವಾಗತಾರ್ಹ. ಆದರೆ, ಈ ಮಸೂದೆಯನ್ನು ತಕ್ಷಣದಿಂದಲೇ ಜಾರಿ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಜಾರಿ ಮಹಿಳೆಯರ ಸ್ವಾಭಿಮಾನದ ಪ್ರತೀಕವಾಗಿದೆ. ಲೋಕಸಭೆಯಲ್ಲಿ ಹಲವು ಬಾರಿ ಮಂಡಿಸಿದರೂ ಯಶಸ್ವಿಯಾಗಿರಲಿಲ್ಲ. ಈಗ ಎಲ್ಲಾ ಪಕ್ಷಗಳ ಒಪ್ಪಿಗೆಯಿಂದ ಈ ಮಸೂದೆ ಅನುಮೋದನೆ ಪಡೆದುಕೊಂಡಿದೆ. ಆದರೆ, ಈ ಮಸೂದೆ ತಕ್ಷಣದಿಂದಲೇ ಜಾರಿಯಾಗಬೇಕು. ಕೇಂದ್ರ ಸರ್ಕಾರ ಜನಗಣತಿಯ ನಂತರ ಜಾರಿ ಮಾಡುವುದಾಗಿ ಹೇಳಿದೆ. ಅಂದರೆ 2029ರಲ್ಲಿ ಜಾರಿಗೆ ಬರುತ್ತದೆ. ಹಾಗೆ ಮಾಡಬಾರದು. ಕೇಂದ್ರ ಸರ್ಕಾರ ಇದನ್ನು ರಾಜಕಾರಣಕ್ಕೆ ಅಥವಾ ಚುನಾವಣೆಯ ಗಿಮಿಕ್ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.
ಈ ಮೀಸಲಾತಿಯಲ್ಲಿ ಒಬಿಸಿ, ಮುಸ್ಲಿಮರಿಗೆ ಒಳ ಮೀಸಲು ನೀಡಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಆದರೆ, ಜನಗಣತಿಗೂ ಮುನ್ನ ಮಹಿಳಾ ಮೀಸಲು ಜಾರಿ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾದರೆ ಈ ವಿಶೇಷ ಅಧಿವೇಶನ ಕರೆಯುವ ಅವಶ್ಯಕತೆಯಾದರೂ ಏನಿತ್ತು? ಹಾಗಾಗಿ ತಕ್ಷಣವೇ ಮಸೂದೆ ಜಾರಿಯಾಗಬೇಕು. ಜನಗಣತಿ ನಂತರ ಎಸ್.ಸಿ., ಎಸ್.ಟಿ., ಒಬಿಸಿ ಮಹಿಳೆಯರ ಮೀಸಲಾತಿಗೆ ಅವಕಾಶ ಕೊಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Related posts

OPS ಜಾರಿ ನಿರೀಕ್ಷೆಯಲ್ಲಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್.

ಹಳೆಯ ಚಲನಚಿತ್ರಗಳ ಗುಣಮಟ್ಟವನ್ನು ಈಗಿನ ಚಿತ್ರಗಳು ಕೂಡ ಕಾಯ್ದುಕೊಳ್ಳಬೇಕು- ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ

ಬಿ.ಎಸ್.ವೈ ಮನೆಗೆ ಭೇಟಿ ನೀಡಿ ಉಪಹಾರ ಸವಿದ ನಿಖಿಲ್ ಕುಮಾರಸ್ವಾಮಿ…