ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಸರ್ ಎಂ.ವಿ ಆದರ್ಶ ಸರ್ವಕಾಲಕ್ಕೂ ಅನುಕರಣೀಯ-ಡಾ. ಎಚ್.ಎಸ್.ನಾಗಭೂಷಣ್

ಶಿವಮೊಗ್ಗ: ದೇಶ ಕಂಡ ಮಹಾನ್ ವ್ಯಕ್ತಿ, ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ತತ್ವ ಆದರ್ಶಗಳು ಸರ್ವ ಕಾಲಕ್ಕೂ ಅನುಕರಣೀಯ. ಪ್ರತಿಯೊಬ್ಬರಿಗೂ ಮಾದರಿ ವ್ಯಕ್ತಿತ್ವ ಎಂದು ಕಮಲಾ ನೆಹರು ಕಾಲೇಜಿನ ಪ್ರಾಚಾರ್ಯ, ಕರ್ನಾಟಕ ಸಂಘದ ಮಾಜಿ ಕಾರ್ಯದರ್ಶಿ ಡಾ. ಎಚ್.ಎಸ್.ನಾಗಭೂಷಣ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಡಾ. ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವೇಶ್ವರಯ್ಯ ಅವರ ಶಿಸ್ತುಬದ್ಧ ಜೀವನ, ನುಡಿದಂತೆ ನಡೆಯುವುದು, ಅಪ್ರತಿಮ ದೇಶಪ್ರೇಮ, ಇಂತಹ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ಅವರು ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಇಂದಿಗೂ ಶಾಶ್ವತವಾಗಿ ಇದ್ದು, ಅವರ ಜೀವನ ಕುರಿತಾದ ಪುಸ್ತಕಗಳು ಸಾಕಷ್ಟು ಪ್ರಕಟಗೊಂಡಿವೆ. ಸಣ್ಣ ಸಣ್ಣ ಘಟನೆಗಳ ಕುರಿತ ಪುಸ್ತಕಗಳು ಬದುಕಿನ ಪಾಠ ಕಲಿಸುತ್ತವೆ. ಅಣೆಕಟ್ಟು, ಕಾರ್ಖಾನೆಗಳು ಹಾಗೂ ಅವರ ಯೋಜನೆಗಳು ಕಾಣಬಹುದಾಗಿದೆ ಎಂದರು.

ಇAದಿನ ಇಂಜಿನಿಯರ್‌ಗಳು ವಿಶ್ವೇಶ್ವರಯ್ಯ ಅವರ ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಕೆಲಸದಲ್ಲಿನ ಯೋಜನಾ ಲಹರಿ, ಶಿಸ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಜನರು ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಹಾಗೂ ಪುಸ್ತಕಗಳನ್ನು ಅಧ್ಯಯನ ನಡೆಸಬೇಕು. ಉತ್ತಮ ಬದುಕು ನಮ್ಮದಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ವಿಶ್ವೇಶ್ವರಯ್ಯ ನಾಡಿಗೆ ಬೆಳಕು ಕೊಟ್ಟ ಮಹನೀಯರು. ದಿವಾನರಾಗಿದ್ದಾಗ ಮಾಡಿದ ಸೇವೆಯು ಎಂದೆAದಿಗೂ ಅಜರಾಮರ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಕಿಶೋರ್‌ಕುಮಾರ್, ಮಾಜಿ ಅಧ್ಯಕ್ಷ ಚಂದ್ರಹಾಸ ರಾಯ್ಕರ್, ವಸಂತ ಹೋಬಳಿದಾರ್, ಎ.ಒ.ಮಹೇಶ್, ಪರಮೇಶ್ವರ್ ಶಿಗ್ಗಾವ್, ಡಾ. ಅರುಣ್, ಚಂದ್ರಶೇಖರಯ್ಯ, ಡಾ. ಧನಂಜಯ, ಎಂ.ಪಿ.ನಾಗರಾಜ್, ಗಣೇಶ್, ಅರುಣ್ ದೀಕ್ಷಿತ್, ಬಿಂದು ವಿಜಯ್‌ಕುಮಾರ್, ಡಾ. ಲಲಿತಾ ಭರತ್ ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಅ. 15 ರಿಂದ  ರಾಜ್ಯ ಮಟ್ಟದ ಜನಜಾಗೃತಿ ಶಿಬಿರ.

ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ವಿಮೆ ಮಾಡಿಸಲು ಪ್ರೆರೇಪಿಸುವಂತೆ ಆರ್ಥಿಕ ಇಲಾಖೆ ಪತ್ರ..

ಬಸ್ ಗಾಗಿ ಕಾಯುತ್ತಾ ರಸ್ತೆ ಬದಿ ನಿಂತಿದ್ಧ ವಿದ್ಯಾರ್ಥಿಗಳಿಗೆ ಖಾಸಗಿ ಬಸ್ ಡಿಕ್ಕಿ: ಓರ್ವ ವಿದ್ಯಾರ್ಥಿನಿ ಸಾವು.