ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಪ್ರಣವಾನಂದ ಸ್ವಾಮೀಜಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧ ವಿಲ್ಲ; ಈಡಿಗ ಸಂಘ ಸ್ಪಷ್ಟನೆ.

ಬೆಂಗಳೂರು:  ಸ್ವಯಂ ಘೋಷಿತ ಸ್ವಾಮೀಜಿ ಯೆಂದು ಪೋಷಿಸಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಪ್ರಣವಾನಂದ ಸ್ವಾಮೀಜಿಗಳು ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿಗಳೆಂದು ಹೇಳಿಕೊಂಡು ಒಡಾಡುತ್ತಿದ್ದಾರೆ.ಈಡಿಗ ಸಮುದಾಯಕ್ಕೂ ಸ್ವಾಮೀಜಿಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈತ ಸಮುದಾಯದಲ್ಲಿ ಒಡಕು ಮೂಡಿಸುತ್ತಿರುವುದು. ರಾಜಕೀಯ ಮುಖಂಡರಲ್ಲಿ ಬಿನ್ನಭಿಪ್ರಾಯಗಳನ್ನು ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೊಲ ಕೊಲ್ಲೋಲ ಮೂಡಿಸುತ್ತಿರುವುದು ಕಂಡು ಬಂದಿದ್ದು ಇದು ಸರಿಯಲ್ಲ. ನಮ್ಮ ಕೇಂದ್ರ ಸಂಘ ಹಾಗೂ ಜಿಲ್ಲಾ ಸಂಘಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬಂದಿದ್ದು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈಡಿಗ ಸಮುದಾಯ ಸಂಘ ಸ್ಥಾಪನೆಯಾಗಿ 78 ವರ್ಷಗಳು ಕಳೆದಿವೆ.2008ರಲ್ಲಿ ರೇಣುಕಾನಂದ ಎಂಬುವವರನ್ನು ಸ್ವಾಮೀಜಿಗಳನ್ನಾಗಿ ನೇಮಕ ಮಾಡಲಾಯಿತು. ಬಳಿಕ ರೇಣುಕಾನಂದರವರು ತಮ್ಮ ಹೆಚ್ಚಿನ ಆಧ್ಯಾತ್ಮಿಕ ಅಧ್ಯಯನಕ್ಕಾಗಿ 2014 ರಲ್ಲಿ ಪೀಠವನ್ನು ತ್ಯಜಿಸಿದರು.

Related posts

ವಕೀಲರ ಮುಂದೆ ನಡೆಯುವ ವಿವಾಹಕ್ಕೂ ಮನ್ನಣೆ- ಸುಪ್ರೀಂಕೋರ್ಟ್

ಅಯೋಧ್ಯೆ ರಾಮ ಮಂದಿರಕ್ಕಾಗಿ 8 ಅಡಿಯ ಬಾಲರಾಮನ ವಿಗ್ರಹ ಕೆತ್ತನೆ ಮುಗಿಸಿದ ಮೈಸೂರಿನ ಅರುಣ್‌

TOD News

ವಕೀಲರೊಬ್ಬರ ಮೇಲೆ ಗಂಭೀರ ಸ್ವರೂಪದ  ಹಲ್ಲೆ ಆರೋಪ: ಮೂವರು ಪೊಲೀಸ್ ಸಿಬ್ಬಂದಿಗಳು ಅಮಾನತು.