ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯಶಿವಮೊಗ್ಗ

ಗಣಪತಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ ಆಚರಿಸೋಣ-ಶಾಸಕ ಎಸ್.ಎನ್. ಚನ್ನಬಸಪ್ಪ

ಶಿವಮೊಗ್ಗ: ಮುಂಬರುವ ಗಣಪತಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಟ್ಟಿಗೆ ಸೇರಿ ಆಚರಿಸೋಣ ಯಾವ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳೋಣ. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸೋಣ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕರ್ತವ್ಯ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಪತಿ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಗಣಪತಿ ಹಬ್ಬಕ್ಕೆ ತನ್ನದೇ ಅದ ಇತಿಹಾಸವಿದೆ. ಲೋಕಮಾನ್ಯ ತಿಲಕ್‍ರು ಇದನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವಂತೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಕೂಡ 1945ರ ನಂತರ ಗಣಪತಿಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ ಎಂದರು.
ಈ ಬಾರಿಯೂಕೂಡ ಗಣಪತಿಹಬ್ಬವನ್ನು ನಾವೆಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸೋಣ. ಹಾಗೆಯೇ ಈದ್ ಮಿಲಾದ್ ಹಬ್ಬ ಕೂಡ ಬಂದಿದೆ. ಈ ಎರಡೂ ಹಬ್ಬಗಳು ಒಟ್ಟಿಗೇ ಬಂದಿರುವುದು ಒಂದು ವಿಶೇಷ. ಆದ್ದರಿಂದ ಮುಂಬರುವ ಈ ಹಬ್ಬವನ್ನು ಯಾವ ಗಲಾಟೆಯೂ ಆಗದಂತೆ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಅಹಿತಕರ ಘಟನೆಗೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಹಲವು ರೌಡಿಗಳ ಮನೆಗಳಿಗೆ ತೆರಳಿ ಎಚ್ಚರಿಕೆ ನೀಡಿದೆ ಎಂದು ಅವರು ಶಿವಮೊಗ್ಗದ ಜನತೆ ಮಣ್ಣಿನ ಗಣಪತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಪ್ರೇಮ ಮೆರೆಯಬೇಕು ಎಂದರು.
ಚೈತ್ರಾ ಕುಂದಾಪುರ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಂತಹ ಘಟನೆಗಳು ನಡೆಯಬಾರದು. ಆಕೆ ತಪ್ಪು ಮಾಡಿದ್ದರೆ ಖಂಡಿತಾ ಶಿಕ್ಷೆಯಾಗಲಿ. ಸತ್ಯ ಹೊರಬರಲೇಬೇಕು. ಆದರೆ ಆ ಹುಡುಗಿ ಪ್ರಖರ ಹಿಂದುತ್ವವಾದಿ. ಹೀಗಾಗಬಾರದಿತ್ತು. ಹಣ ಕೊಟ್ಟವರು ಕೂಡ ಎಚ್ಚರಿಕೆಯಿಂದ ಇರಬೇಕಾಗಿತ್ತು. ಈ ನಿಟ್ಟಿನತ್ತಲೂ ತನಿಖೆಯಾಗಬೇಕು. ಸಹಜವಾಗಿಯೇ ಕಾಂಗ್ರೆಸ್ ಸರ್ಕಾರ ಹಿಂದುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮೇಯರ್ ಶಿವಕುಮಾರ್ ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಪ್ರಮುಖರಾದ ಎನ್.ಜಿ. ಜಗದೀಶ್, ಬಾಲು ಇದ್ದರು.

Related posts

ಕಾವ್ಯ ಕೇಡು ಸೇಡುಗಳಿಂದ ಮುಕ್ತವಾದುದು-ಕವಯಿತ್ರಿ ಸವಿತಾ ನಾಗಭೂಷಣ

13,352 ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್.

ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ – ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್