ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ಮೌಲ್ಯಯುತ ಅಂಶಗಳ ಮಾರ್ಗದರ್ಶನ ಮುಖ್ಯ-ಲೇಖಕಿ ಶ್ರೀರಂಜಿನಿ ದತ್ತಾತ್ರಿ 

ಶಿವಮೊಗ್ಗ: ಮೌಲ್ಯಗಳನ್ನು ಬರೆದು ಕಲಿಸುವುದಕ್ಕೆ ಆಗುವುದಿಲ್ಲ. ಮಾತನಾಡಿ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾವು ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಇತರರಿಗೂ ಮಾದರಿ ಆಗುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ, ಲೇಖಕಿ ಶ್ರೀರಂಜಿನಿ ದತ್ತಾತ್ರಿ ಹೇಳಿದರು.

ವಿಶ್ವ ಸಾಕ್ಷರತಾ ದಿನದ ಪ್ರಯುಕ್ತ ರಾಜೇಂದ್ರ ನಗರದ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಸಮಾಜದ ಅಭಿವೃದ್ಧಿಯಲ್ಲಿ ಮೌಲ್ಯಾಧಾರಿತ ಶಿಕ್ಷಣದ ಪಾತ್ರ” ವಿಷಯ ಕುರಿತು ಮಾತನಾಡಿದರು.

ಇಂದಿನ ಯುವಪೀಳಿಗೆಗೆ ಮೌಲ್ಯಾಧರಿತ ಶಿಕ್ಷಣದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಭಾರತೀಯ ಶ್ರೇಷ್ಠ ಸಾಧಕರ ಬದುಕಿನ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಕಲಿಸಲಾಗುತ್ತಿದೆಯೇ ಎಂಬುದು ಪ್ರಶ್ನೆಯಾಗಿದೆ. ಮೌಲ್ಯ ಎಂದರೆ ಬೆಲೆಯಲ್ಲ, ತೂಕವಲ್ಲ. ಮೌಲ್ಯ ಎಂದರೆ ಜೀವಿಗಳ ಅದರಲ್ಲೂ ಮಾನವರ ಮನಸ್ಸುಗಳನ್ನು ಶಕ್ತಿಗೊಳಿಸಿ ಬಲವಾದ, ವ್ಯಕ್ತಿತ್ವ ರೂಪಿಸಿ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಸಹಕಾರ, ಅಹಿಂಸೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ‍್ಯ, ಸಹೋದರತ್ವ, ಸಹಿಷ್ಣತೆ ಕಲಿಸುವುದೇ ಆಗಿರುತ್ತದೆ ಎಂದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿರುವ ಕುಂದು ಕೊರತೆಗಳು, ಯುವ ಮನಸ್ಸಿನ ದೃಷ್ಟಿಕೋನಗಳು, ವ್ಯವಸ್ಥೆ, ವ್ಯವಸಾಯ, ವ್ಯಾಪಾರ, ಕುಟುಂಬ ರಕ್ಷಣೆಯ ಬಗ್ಗೆ ಜಾಗೃತವಾಗಬೇಕಾದ ಅನಿವಾರ್ಯತೆ ಇದ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್, ಉಪಾಧ್ಯಕ್ಷರಾದ ಜಿ. ವಿಜಯ ಕುಮಾರ್, ನಿಯೋಜಿತ ಅಧ್ಯಕ್ಷ ಅರುಣ್ ದೀಕ್ಷಿತ್, ಪ್ರಮುಖರಾದ ವಸಂತ ಹೋಬಳಿದಾರ್, ರವೀಂದ್ರನಾಥ್ ಐತಾಳ್, ಚಂದ್ರಹಾಸ್ ರಾಯ್ಕರ್, ಬಿಂದು ವಿಜಯಕುಮಾರ್, ವಿದ್ಯಾ, ವಿಜಯಕ್ಕ, ಮೋಹನ್, ಮಹೇಶ್, ಮಾಧವಾಚಾರ್, ವಿದ್ಯಾ ಉಪಸ್ಥಿತರಿದ್ದರು.

Related posts

30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ- ಆರ್ ಬಿಐನಿಂದ ಹೊಸ ನಿಯಮ.

Official Site Do Cassino On-line Pin Up Login E Registr

TOD News

ರಾಜ್ಯ ಸರ್ಕಾರಿ ನೌಕರರಿಗೊಂದು ಮಾಹಿತಿ: ವಿಮೆ ಮಾಡಿಸಲು ಪ್ರೆರೇಪಿಸುವಂತೆ ಆರ್ಥಿಕ ಇಲಾಖೆ ಪತ್ರ..