ಕನ್ನಡಿಗರ ಪ್ರಜಾನುಡಿ
ಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳುಶಿವಮೊಗ್ಗ

ವಿಶ್ವ ಬಂಟರ ಸಾಂಸ್ಕೃತಿಕ ಸ್ಪರ್ಧೆ ಮತ್ತು ವಿಶ್ವ ಬಂಟರ ಕ್ರೀಡಾಕೂಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂಪಾಯಿ ಒಂದು ಲಕ್ಷ. 

ಶಿವಮೊಗ್ಗ:  ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಡಳಿತ ಮಂಡಳಿಯ ಸದಸ್ಯರ ಸಭೆಯು ಸೆಪ್ಟಂಬರ್ 4 ರಂದು ಮುಲ್ಕಿ ಬಳಿಯ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುವ ವಿಶ್ವ ಬಂಟರ ಸಾಂಸ್ಕೃತಿಕ ಸ್ಪರ್ಧೆ ಮತ್ತು ವಿಶ್ವ ಬಂಟರ ಕ್ರೀಡಾಕೂಟದಲ್ಲಿ ಸ್ಪರ್ಧೆಗಳು ಮತ್ತು ಬಹುಮಾನಗಳನ್ನು ಈ ಕೆಳಗಿನಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ
???? ಕಬ್ಬಡಿ :
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ,
ದ್ವಿತೀಯ ಬಹುಮಾನ 75 ಸಾವಿರ,
ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 50 ಸಾವಿರ ನಗದು ನೀಡಲಾಗುವುದು .

???? ವಾಲಿಬಾಲ್ :
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ,
ದ್ವಿತೀಯ ಬಹುಮಾನ 75 ಸಾವಿರ,
ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 50 ಸಾವಿರ ನಗದು ನೀಡಲಾಗುವುದು .

???? ಹಗ್ಗಜಗ್ಗಾಟ :
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ,
ದ್ವಿತೀಯ ಬಹುಮಾನ 75 ಸಾವಿರ,
ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 50 ಸಾವಿರ ನಗದು ನೀಡಲಾಗುವುದು .

???? ತ್ರೋಬಾಲ್ :
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ,
ದ್ವಿತೀಯ ಬಹುಮಾನ 75 ಸಾವಿರ,
ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 50 ಸಾವಿರ ನಗದು ನೀಡಲಾಗುವುದು .
???? ಪಥ ಸಂಚಲನ;
ಪ್ರಥಮ ಬಹುಮಾನ 1 ಲಕ್ಷ ರೂಪಾಯಿ,
ದ್ವಿತೀಯ ಬಹುಮಾನ 75 ಸಾವಿರ,
ತೃತೀಯ ಬಹುಮಾನ 50 ಸಾವಿರ ಹಾಗೂ ನಾಲ್ಕನೇ ಬಹುಮಾನ 50 ಸಾವಿರ ನಗದು ನೀಡಲಾಗುವುದು .

.ಐದು ನಿಮಿಷಗಳ ಕಾಲಾವಧಿಯ ನೃತ್ಯ ಸ್ಪರ್ಧೆ ಯಲ್ಲಿ ಪ್ರಥಮ ಒಂದು ಲಕ್ಷ ರೂಪಾಯಿ, ದ್ವಿತೀಯ 75 ಸಾವಿರ,
ತೃತೀಯ 50 ಸಾವಿರ ಹಾಗೂ ಚತುರ್ಥ ಮತ್ತು ಪಂಚಮ ಪ್ರಶಸ್ತಿಯನ್ನು ನೀಡಲಾಗುವುದು.

ಈ ಎಲ್ಲಾ ಸ್ಪರ್ಧೆಯಲ್ಲಿ ಬಂಟ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸ ಬೇಕಾಗಿ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಯವರು ವಿನಂತಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ , ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಮಹಾದಾನಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇಂನ್ನಜೆ,ಕ್ರೀಡೋತ್ಸವ ಸಮಿತಿಯ ಸಂಚಾಲಕ ಹಾಗೂ ಒಕ್ಕೂಟದ ಪೋಷಕ ಸದಸ್ಯರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಹಾಗೂ ಒಕ್ಕೂಟದ ಪೋಷಕ ಸದಸ್ಯರಾದ ಶ್ರೀ ಚಂದ್ರಹಾಸ ಡಿ.ಶೆಟ್ಟಿ ಪೋಷಕರಾದ ಶ್ರೀ ಪುರುಷೋತ್ತಮ್ ಶೆಟ್ಟಿ,ಶ್ರೀ ಶ್ರೀನಾಗೇಶ್ ಹೆಗ್ಡೆ, ಶ್ರೀ ಸುಧೀರ್ ಶೆಟ್ಟಿ, ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಶ್ರೀ ಶ್ರೀಧರ್ ಶೆಟ್ಟಿ ಆರೂರು, ಸುಮಾರು 50 ಬಂಟರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯ ಸದಸ್ಯರುಗಳು,ಮಹಿಳಾ ವಿಭಾಗದ ಅಧ್ಯಕ್ಷರು ಮತ್ತು ಸದಸ್ಯರುಗಳು, ಮಾಧ್ಯಮ ಮಿತ್ರರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related posts

 ಡಿಕೆ ಶಿವಕುಮಾರ್ ಸಮ್ಮುಖದಲ್ಲಿ  ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ.

Slotpark Casinos Slot Google Play’de Uygulamala

TOD News

ಪೆಟ್ರೋಲ್ ,ಡೀಸೆಲ್, ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚಿಂತನೆ.