ಕನ್ನಡಿಗರ ಪ್ರಜಾನುಡಿ
ಕ್ರೈಮ್ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

1965ರಲ್ಲಿ ಎಮ್ಮೆ ಕದ್ದಿದ್ದ ಆರೋಪಿ 57 ವರ್ಷದ ಬಳಿಕ ಖಾಕಿ ಬಲೆಗೆ..

ಬೀದರ್: 57 ವರ್ಷದ ಹಿಂದೆ ಎಮ್ಮೆ ಕದ್ದು ತಲೆಮರಿಸಿಕೊಂಡಿದ್ದ ಆರೋಪಿಯನ್ನ ಪೊಲೀಸರು ಈಗ ಬಂಧಿಸಿದ್ದಾರೆ.

ಹೌದು ಎಮ್ಮೆ ಕದ್ದು ತಲೆ ಮರೆಸಿಕೊಂಡಿದ್ದ ಆರೋಪಿ ಗಣಪತಿ ವಿಠ್ಠಲ ವಾಗ್ಮೋರೆಯನ್ನ 57 ವರ್ಷದ ಬಳಿಕ ಬೀದರ್ ಪೊಲೀಸರು ಬಂಧಿಸಿದ್ದಾರೆ.  ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಟಾಕಳಗಾಂವ್ ಗ್ರಾಮದ ನಿವಾಸಿ ಗಣಪತಿ ವಿಠ್ಠಲ ವಾಗ್ಮೋರೆ ಎಂಬುವರು 1965 ಎಪ್ರಿಲ್ 25 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದಲ್ಲಿ ಮುರಳಿಧರ್ ಮಾಣಿಕರಾವ್ ಮಾಣಿಕರಾವ್ ಕುಲಕರ್ಣಿ ಎಂಬುವರ ಎರಡು ಎಮ್ಮೆ (Buffalo) ಮತ್ತು ಒಂದು ಎಮ್ಮೆ ಕರುವನ್ನ ಕದ್ದುಕೊಂಡು ಪರಾರಿಯಾಗಿದ್ದ.

ವಿಠ್ಠಲ ವಾಗ್ಮೋರೆ ಕಳ್ಳತನ ಮಾಡಿದಾಗ ಈತನಿಗೆ ವಯಸ್ಸು ಕೇವಲ 20 ವರ್ಷ. ಈಗ 80ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಾನೆ! ಇನ್ನು ಎಮ್ಮೆ ಕದ್ದ ವಾರದಲ್ಲಿಯೇ ಈತ ಭಾಲ್ಕಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪೊಲೀಸರು ಈತನನ್ನ ಬಂಧಿಸಿದ್ದರು. ಆಗ ಜಾಮೀನಿನ ಮೇಲೆ ಹೊರ ಬಂದಿದ್ದ ಗಣಪತಿ ವಿಠ್ಠಲ ವಾಗ್ಮೋರೆ, ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. 57 ವರ್ಷದಿಂದ ಪೊಲೀಸರು ಈತನನ್ನ ಹುಡುಕುತ್ತಲೇ ಇದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಕದ್ದುಮುಚ್ಚಿ ಓಡಾಡುತ್ತಿದ್ದ. ಆದರೆ ಪೊಲೀಸರು ಈತನನ್ನು ಬಂಧಿಸಿ, ಇದೀಗ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಸುಮಾರು ವರ್ಷದಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ ಗೆ ಹಾಜರಾಗದೆ ಇರುವ LPR (ಲಾಂಗ್ ಪೆಂಡಿಗ್ ರಿಪೋರ್ಟ್) ಪ್ರಕರಣ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 57 ವರ್ಷದ ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಈ ತಂಡದಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಲ್.ಎಸ್. ತಿಳಿಸಿದ್ದಾರೆ.

 

Related posts

ರೈತರ  ಕಾವೇರಿ ನದಿ ನೀರು ಹೋರಾಟಕ್ಕೆ ನಿರ್ಮಲಾನಂದನಾಥ ಶ್ರೀಗಳು ಸಾಥ್.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಕೇಸ್ ತಡೆಗೆ ‘ಆರೋಗ್ಯ ಕವಚ ಯಂತ್ರ’ ಸ್ಥಾಪನೆ..!

ಕೆ.ಎ.ದಯಾನಂದ ಐಎಎಸ್ ವಾಚನಾಲಯ ಲೋಕಾರ್ಪಣೆ ನ. 25ಕ್ಕೆ