ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಶಕ್ತಿ ಯೋಜನೆಗೆ 3 ತಿಂಗಳು ಪೂರೈಕೆ: ಈವರೆಗೆ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತವೆಷ್ಟು..?

ಬೆಂಗಳೂರು:  ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆ ಜಾರಿಯಾಗಿ  ಮೂರು ತಿಂಗಳು ಕಳೆದಿದ್ದು, ಇದುವರೆಗೆ ಮಹಿಳೆಯರು 13.20 ಕೋಟಿ ಶೂನ್ಯ ಟಿಕೆಟ್ಗಳನ್ನು ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದಾರೆ.

ಮಹಿಳಾ ಸಬಲೀಕರಣದ ದೃಷ್ಠಿಯಿಂದ ರಾಜ್ಯ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಮಹಿಳಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಘೋಷಿಸಿತ್ತು. ಇದೀಗ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಸೆಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್ಗಳ ಸಂಖ್ಯೆ 13,20,53,266 ಗಳಾಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ. 332,77,03,789 ಗಳಾಗಿದೆ.

ಜೂನ್ 11 ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್ ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 65.15 ಕೋಟಿಗಳಾಗಿದೆ.

ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 111.78 ಕೋಟಿಗಳಾಗಿದೆ.

ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 115.42 ಕೋಟಿಗಳಾಗಿದೆ.

ಸಪ್ಟೆಂಬರ್ 1ರಿಂದ 10 ರವೆರೆಗೆ 1.56 ಕೋಟಿ ಶೂನ್ಯ ಟಿಕೆಟ್ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 40.42 ಕೋಟಿಗಳಾಗಿದೆ.

 

Related posts

ಕಾವೇರಿ ನದಿ ನೀರು ವಿವಾದ  ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ: ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಲು ಸರ್ಕಾರ ಸಜ್ಜು.

ಸಾರ್ವಜನಿಕರೇ ಎಚ್ಚರ: ರಾಜ್ಯಾದ್ಯಂತ ಮತ್ತೆ ಹೆಚ್ಚಳವಾಗಿದೆ ಡೆಂಗ್ಯೂ ಹಾವಳಿ..

ಭಾರತದ ಹಸಿರು ಕ್ರಾಂತಿಯ ಹರಿಕಾರ M.S ಸ್ವಾಮಿನಾಥನ್ ನಿಧನ