ಕನ್ನಡಿಗರ ಪ್ರಜಾನುಡಿ
ಚಿಕ್ಕಮಗಳೂರುಜಿಲ್ಲೆಪ್ರಧಾನ ಸುದ್ದಿಮುಖ್ಯಾಂಶಗಳು

ಆರ್ಥಿಕವಾಗಿ ಮಹಿಳೆಯರ ಸ್ವಾಲಂಬನೆಗೆ ಶೈಲಾಚಲುವಯ್ಯ ಕರೆ.

ಚಿಕ್ಕ್ಕಮಗಳೂರು:  ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಶೈಲಾಚಲುವಯ್ಯ ಹೇಳಿದರು.
ಟೌನ್ ಮಹಿಳಾ ಸಮಾಜದ ಸವೂರ್ ಸಭಾಂಗಣದಲ್ಲಿ ಚಿಕ್ಕಮಗಳೂರು ತಾಲ್ಲೂಕು ಮಹಿಳಾ ವಿವಿದೊದ್ದೇಶ ಸಹಕಾರ ಸಂಘದ 2022-23ನೆಯ ಸಾಲಿನ 26ನೆಯ ವರ್ಷದ ವಾರ್ಷಿಕ ಮಹಾಸಭೆಯನ್ನು ನಿನ್ನೆ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸಬಲತೆಗೆ ಪೂರಕವಾಗಿ ಮಹಿಳೆಯರಿಗೆ ಸಣ್ಣಪುಟ್ಟ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸಕ್ಕೆ, ವ್ಯಾಪಾರ, ಗೃಹ ಕೈಗಾರಿಕೆಗಳಿಗೆ ಸಾಲಸೌಲಭ್ಯ ನೀಡುವ ಮೂಲಕ ಮಹಿಳಾ ಸೊಸೈಟಿ 25ವರ್ಷಗಳಿಂದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ 1002 ಜನ ಸದಸ್ಯನೀಯರನ್ನು ಹೊಂದಿದ್ದು ಸಂಘದ ಜೀವಾಳ ಎಂದು ಹೇಳಬಹುದು. ಹತ್ತಾರು ಮಹಿಳೆಯರು ಪ್ರತಿವರ್ಷ ನಮ್ಮ ನೆರವಿನಿಂದ ಬದುಕು ಕಟ್ಟಿಕೊಳ್ಳುತ್ತಿರುವುದು ಸಂತಸದ ಸಂಗತಿ.
ವಾರ್ಷಿಕ ಸುಮಾರು 25ಲಕ್ಷರೂ. ವ್ಯವಹಾರ ನಡೆಸುತ್ತಿರುವ ವಿವಿದೊದ್ದೇಶ ಸಹಕಾರ ಸಂಘ 1.8ಲಕ್ಷರೂ. ಖಾಯಂ ಠೇವಣಿ ಹೊಂದಿದೆ. 1.5ಲಕ್ಷರೂ. ಸಣ್ಣ ಉಳಿತಾಯವಿದ್ದು, 6.5ಲಕ್ಷರೂ.ಸಾಲಸೌಲಭ್ಯ ವಿತರಿಸಿದೆ ಎಂದ ಶೈಲಾಚಲುವಯ್ಯ, ಸಾಲಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮತ್ತೊಬ್ಬ ಮಹಿಳೆಯರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.
ಅಲ್ಪಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೊಸೈಟಿ 18,000ಲಾಭ ಗಳಿಸಿದ್ದು, ಆಡಿಟ್ ವರದಿಯಲ್ಲಿ ‘ಬಿ’ಶ್ರೇಣಿಯನ್ನು ಹೊಂದಿದೆ. ಸದಸ್ಯರು ಹೆಚ್ಚು ಆಸಕ್ತಿಯಿಂದ ಸೊಸೈಟಿಯ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಇಲ್ಲೆ ವ್ಯವಹಾರವನ್ನು ಮಾಡುವುದರಿಂದ ಸಹಕಾರಿ ಚಳುವಳಿ ಬಲಗೊಳಿಸಿದಂತಾಗುತ್ತದೆ ಎಂದ ಅಧ್ಯಕ್ಷೆ ಶೈಲಾಚಲುವಯ್ಯ, ಮಹಿಳೆಯರ ಅಭಿವೃದ್ಧಿಗೆ ಸರ್ಕಾರವೂ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಅರಿತು ಸದ್ಭಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸ್ವಾವಲಂಬನೆಹೊಂದಲು ಸಹಾಯವಾಗುತ್ತದೆ ಎಂದರು.
ನಿರ್ದೇಶಕರುಗಳಾದ ಲಕ್ಷ್ಮಿನಂಜಯ್ಯ ಸ್ವಾಗತಿಸಿ, ಗೀತಾಗಿರೀಶ್ ವಂದಿಸಿದರು. ಗೀತಾಸುಂದ್ರೇಶ್ ಪ್ರಾರ್ಥಿಸಿದರು. ಕೆ.ಟಿ.ಜಯಶೀಲಾ, ಸುಜಾತಶಿವಕುಮಾರ್, ಹೇಮಾ, ಸುಲೋಚನಾ, ಮೋಹನಕುಮಾರಿ, ಪದ್ಮಾಮಹಾಂತೇಶ್, ಮುಖ್ಯಕಾರ್ಯನಿರ್ವಹಾಧಿಕಾರಿ ಪವಿತ್ರಅರಸ್ ವೇದಿಕೆಯಲ್ಲಿದ್ದರು. ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಶೈಲಾಚಲುವಯ್ಯ ಬಹುಮಾನ ವಿತರಿಸಿದರು.

Related posts

ಜಿಕಾ ವೈರಸ್ ಬಗ್ಗೆ ಭಯ ಬೇಡ: ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ.

ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ ಬ್ರಿಟಿಷರ ಏಜೆಂಟರ ಬಗ್ಗೆ ಎಚ್ಚರವಿರಲಿ-ಸಿಎಂ ಸಿದ್ದರಾಮಯ್ಯ ಕಿವಿಮಾತು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇ-ಎಫ್.ಐ.ಆರ್ ಮತ್ತು ಇ-ಚಲನ್ ವ್ಯವಸ್ಥೆ..