ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ಬಿಜೆಪಿ ನಾಯಕರು ದೆಹಲಿಗೆ ಹೋಗಿ ಪ್ರಧಾನಿಗೆ ಒತ್ತಡ  ಹೇರಲಿ- ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ.

ಬೆಂಗಳೂರು:  ಕೆಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಲು ಬಿಜೆಪಿ ನಿಯೋಗ ನಿರ್ಧರಿಸಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ನಾಯಕರು ದೆಹಲಿಗೂ ಹೋಗಲಿ. ಮೇಕೆದಾಟು ಯೋಜನೆ ಸಂಬಂಧ ಪ್ರಧಾನಿಗೆ ಒತ್ತಡ ಹಾಕಲಿ ಎಂದು ಲೇವಡಿ ನಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿ ನಾಯಕರು ದೆಹಲಿಗೂ ಹೋಗಲಿ. ಮೇಕೆದಾಟುಗೆ ಕ್ಲಿಯರೆನ್ಸ್ ಕೊಡಿ ಅಂತಾ ಹೇಳಲಿ. ಪ್ರಧಾನಿ ಮೋದಿಗೆ ಒತ್ತಡ ಹಾಕಲಿ. ಆಗ ಬಿಜೆಪಿಯವರ ಹೋರಾಟಕ್ಕೆ ಬಲ ಬರುತ್ತೆ ಎಂದರು.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ  ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ತಾತ್ಕಾಲಿಕ ಸ್ಥಗಿತ  ವಿಚಾರ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈಗಾಗಲೇ 2 ಸಾವಿರ ರೂ. ಜಮೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಗೊಂದಲವಾಗದಿರಲಿ ಎಂದು ರಾಜ್ಯ ಸರ್ಕಾರ ನೋಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ನೋಂದಾಯಿತ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಆದ ನಂತರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ ಎಂದು ತಿಳಿಸಿದರು

1.28 ಕೋಟಿ ಫಲಾನುಭವಿಗಳ ಪೈಕಿ 1.13 ಕೋಟಿ ನೋಂದಣಿಯಾಗಿದೆ. 17 ಲಕ್ಷ ಫಲಾನುಭವಿಗಳು ಬ್ಯಾಂಕ್ ಅಕೌಂಟ್, ಕೆವೈಸಿ ಅಪ್ಡೇಟ್ ಮಾಡಿಸಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Related posts

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವರ್ಗಾವಣೆ ಮಾಡಿದ ಸರ್ಕಾರ

ಒಂದು ರಾಷ್ಟ್ರ, ಒಂದು ಚುನಾವಣೆ: ಪರಿಶೀಲನೆಗೆ ಮಾಜಿ ರಾಷ್ಟ್ರಪತಿ ನೇತೃತ್ವದಲ್ಲಿ ಸಮಿತಿ ರಚನೆ.

ರಾಜ್ಯ ರೈತರಿಗೆ ಶಾಕ್: ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂ. ನೀರು ಬಿಡುವಂತೆ ಆದೇಶ..