ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ರಾಜ್ಯದಲ್ಲಿ ಈ ಬಾರಿಯೂ ದಸರಾ ರಜೆ ಕಡಿತ.

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಕಡಿತಗೊಳಿಸಲಾಗಿದ್ದು, ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಅಕ್ಟೋಬರ್ ತಿಂಗಳಲ್ಲಿ ನೀಡಲಾಗುತ್ತಿದ್ದ ದಸರಾ ರಜೆಯನ್ನ ಕೋವಿಡ್  ಕಾರಣದಿಂದಾಗಿ ಕಳೆದ ಎರಡ್ಮೂರು ವರ್ಷಗಳಿಂದ  ಕಡಿತಗೊಳಿಸಲಾಗಿತ್ತು. ಅ.2 ರಿಂದ ಅ.29ರವರೆಗೆ ನೀಡಲಾಗುತ್ತಿದ್ದ ದಸರಾ ರಜೆಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಕಡಿತಗೊಳಿಸಲಾಗಿತ್ತು.  ಲಾಕ್ ಡೌನ್ ನಲ್ಲಿ ನಡೆಯದ ತರಗತಿಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಆದರೂ ಸಹ ರಾಜ್ಯ ಸರ್ಕಾರ ಹಿಂದಿನ ಅದೇ ಕಡಿತ ನೀತಿ ಅನುಸರಿಸುತ್ತಿದೆ. ಸಾಮಾನ್ಯ ಶಾಲೆಗಳಿಗೆ ಆ.8 ರಿಂದ 24 ಕ್ಕೆ ಸೀಮಿತಗೊಂಡಿದ್ದು, ವಿಶೇಷ ಶಾಲೆ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಿದೆ. ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ.

 

Related posts

ಶಾಲಾ ಮಕ್ಕಳನ್ನು ಮ್ಯಾನೇಜ್ ಮೆಂಟ್ ಸೇವೆಗಳಿಗೆ ಬಳಸಿದ್ರೆ ಕಠಿಣ ಕ್ರಮ- ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ.

ಸೀನಿಯರ್ ಚೇಂಬರ್ ಇಂಟರ್‍ನ್ಯಾಷನಲ್ ಸಂಸ್ಥೆ ವತಿಯಿಂದ ಪ್ರಾಂತೀಯ ಸಮ್ಮೇಳನ ಭಾವನೋತ್ಸವ.

ದೇಶದ ಪ್ರಸಿದ್ದ ಕ್ಷೇತ್ರಗಳ ದರ್ಶನಕ್ಕೆ ಕಡಿಮೆ ವೆಚ್ಛದಲ್ಲಿ ಪ್ರವಾಸ ಆಯೋಜನೆ ಕಾರ್ಯ ಶ್ಲಾಘನೀಯ-ಎನ್.ಗೋಪಿನಾಥ್