ಕನ್ನಡಿಗರ ಪ್ರಜಾನುಡಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಪೋಷಕರಿಗೆ ಇನ್ನಿಲ್ಲ ಟೆನ್ಷನ್: ಮನೆಗೆ ಬರುತ್ತೆ ಮಕ್ಕಳು ಏನ್ಮಾಡ್ತಿದ್ದಾರೆ ಎಂಬ ಪಿನ್ ಟು ಪಿನ್ ಮಾಹಿತಿ..

ಮಂಗಳೂರು:  ಶಾಲೆ-ಕಾಲೇಜಿಗೆ  ಮಕ್ಕಳನ್ನು ಕಳುಹಿಸುವ ಪೋಷಕರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದ್ದು,  ಶಾಲೆಯಲ್ಲಿ ಮಕ್ಕಳು ಏನು ಮಾಡ್ತಿದ್ದಾರೆ? ತರಗತಿಗಳಿಗೆ ಚಕ್ಕರ್  ಹೊಡೆದಿದ್ದಾರೆಯೇ ಅಥವಾ ಹೊರಗೆ ಹೋಗಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳಿಗೆ ಮನೆಯಲ್ಲೇ ಕುಳಿತು ಉತ್ತರ ಪಡೆಯಬಹುದು.

ಹೌದು, ಮನೆಯಲ್ಲೇ ಕೂತು ಪೋಷಕರು  ಮಕ್ಕಳ ಶಾಲೆ ಚಟುವಟಿಕೆಗಳನ್ನು ಗಮನಿಸಲು ನೂತನ ಅವಿಷ್ಕಾರವೊಂದನ್ನ ಮಾಡಲಾಗಿದೆ. ,  ಮಂಗಳೂರಿನ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಯೊಂದು ಈ ಅವಿಷ್ಟಾರ ಮಾಡಿದೆ. ಮಂಗಳೂರು ನಗರ ಹೊರವಲಯದ ಮುಡಿಪು ಪ್ರದೇಶ ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಶಾಲೆ-ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನ ಗಮನಿಸಲು ನೂತನ ಆ್ಯಪ್ ರಚಿಸಲಾಗಿದ್ದು, ವಿಎಂಎಸ್ ಟೆಕ್ನಲಾಜಿ ಮೂಲಕ ಮಕ್ಕಳ ಚಲನವಲನ ಸಂಗ್ರಹ ಮಾಡಕೊಳ್ಳಲಾಗುತ್ತಿದೆ. ಮುಂಬೈ ಮೂಲದ ಕಂಪೆನಿ ಸಿದ್ಧಪಡಿಸಿರುವ ಈ ಟೆಕ್ನಾಲಜಿಯನ್ನು ಶಾಲೆಯಲ್ಲಿ ಆರು ತಿಂಗಳು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಈಗ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳ ಐಡಿಕಾರ್ಡ್ ನಲ್ಲಿ ಚಿಪ್ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಐಡಿ ಸ್ಕ್ಯಾನ್ ಮಾಡಬೇಕು. ಆಗ ಕ್ಯಾಮೆರಾದಲ್ಲಿ ಮಕ್ಕಳ ಫೇಸ್ ಸ್ಕ್ಯಾನ್ ಆಗುತ್ತದೆ. ಆಯಪ್ ಮೂಲಕವಾಗಿ ಮಕ್ಕಳ ಶಾಲೆಗೆ ಪ್ರವೇಶಿಸಿರೋದು ಆಯಪ್ ಮೂಲಕ ಮಕ್ಕಳ ಪೋಟೋ ಹೆತ್ತವರಿಗೆ ತಿಳಿಯುತ್ತದೆ. ಮಕ್ಕಳದ ಮುಖದ ಚಿತ್ರವೂ ಆಯಪ್ ನಲ್ಲಿ ಅಪ್ಡೇಟ್ ಆಗುತ್ತದೆ. ಶಾಲೆಯಲ್ಲಿ ನಡೆಯುವ ಪಠ್ಯ, ದಿನದ ಪಾಠ, ಶಿಕ್ಷಕರ ವಿವರ ,ಸ್ಕೂಲ್ ಬಸ್ನ ವಿವರ ಎಲ್ಲವೂ ಆಯಪ್ ನಲ್ಲಿ ಲಭ್ಯವಾಗುತ್ತದೆ..

ಜ್ಞಾನದೀಪ ಶಾಲೆ ಮತ್ತು ಸೂರಜ್ ಪಿಯು ಕಾಲೇಜಿನಲ್ಲಿ ಒಟ್ಟು 680 ವಿದ್ಯಾರ್ಥಿಗಳಿದ್ದು,ಶಿಕ್ಷಕರ ಸಹಿತ ಎಲ್ಲರ ದಿನದ ವಿವರ ಈ ಆಯಪ್ ನಲ್ಲಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳು ಶಾಲೆಯಿಂದ ನಿರ್ಗಮಿಸಿದ ಮೆಸೇಜ್ ಕೂಡಾ ಹೆತ್ತವರಿಗೆ ಆಯಪ್ ನಲ್ಲಿ ಗೊತ್ತಾಗಲಿದೆ.ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂಗಳೂರಿನ ಕಾಲೇಜಿನಲ್ಲಿ ನೂತನ ಅವಿಷ್ಕಾರ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಐಡಿ ಕಾರ್ಡ್ ಬಗ್ಗೆ ಹೆತ್ತವರೂ ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಪಿನ್ ಟು ಪಿನ್ ಮಾಹಿತಿ ಹೆತ್ತವರಿಗೆ ಲಭ್ಯ ಆಗಲಿದೆ. ಕಾಲೇಜುಗಳಲ್ಲಿ ಈ ಆಯಪ್ ಬಳಕೆ ಪ್ರಯೋಜನಕಾರಿ ಯಾಗಲಿದೆ. ತರಗತಿ ಬಂಕ್ ಮಾಡಿ ಸುತ್ತಾಡುವ ವಿದ್ಯಾರ್ಥಿಗಳ ವಿವರ ಹೆತ್ತವರಿಗೆ ಸಿಗಲಿದೆ. ದೊಡ್ಡ ವಿದ್ಯಾರ್ಥಿ ಸಮೂಹ ಇರುವ ಶಾಲಾ-ಕಾಲೇಜುಗಳಿಗೆ ಈ ಆಯಪ್ ಪ್ರಯೋಜನಕಾರಿ ಎಂದು ಹೆತ್ತವರು ಮೆಚ್ಚುಗೆ ಸೂಚಿಸಿದ್ದಾರೆ.

 

Related posts

ರಾಜಕೀಯಕ್ಕಾಗಿ ಬಿಜೆಪಿಯವರಿಂದ ಬರ ಅಧ್ಯಯನ-ಸಿಎಂ ಸಿದ್ದರಾಮಯ್ಯ 

ಬಿಜೆಪಿಗೆ ಗುಡ್ ಬೈ ಹೇಳಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ.

ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿಯುತ್ತಿದ್ದಾರೆ ಭಾರತದ ಮಹಿಳೆಯರು.