ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಟ್ವಿಟ್ಟರ್ ಬಳಕೆದಾರರೇ ಗಮನಿಸಿ : ಇನ್ಮುಂದೆ ಸಿಗುತ್ತೆ ಆಡಿಯೋ ವಿಡಿಯೋ ಕಾಲ್ ಸೌಲಭ್ಯ..

ನವದೆಹಲಿ : ಟ್ವಿಟರ್ ‘X’ ಬಳಕೆದಾರರಿಗೆ ಸಂಸ್ಥೆಯ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ವಿಡಿಯೊ-ಆಡಿಯೊ ಕಾಲ್ ಸೌಲಣ್ಯ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ನಡುವೆ ಈಗಾಗಲೇ ‘ಟ್ವಿಟರ್ ಹೆಸರನ್ನು ‘ಎಕ್ಸ್’ ಎಂದು ಬದಲಾಯಿಸಿರುವ ಎಲನ್ ಮಸ್ಕ್, ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ‘ಟ್ವಿಟರ್ ಹೆಸರನ್ನು  ಪಕ್ಷಿಯನ್ನು ಎಕ್ಸ್ ಲೋಗೋದಿಂದ ಬದಲಾಯಿಸಲಾಗಿದೆ.   ಎಕ್ಸ್ ಈಗ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಹೊಂದಿರುತ್ತದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ.

ಫೋನ್ ಸಂಖ್ಯೆಯ ಅಗತ್ಯವಿಲ್ಲದೆ ಬಳಕೆದಾರರೊಂದಿಗೆ ಕರೆಗಳನ್ನು ಸಂಪರ್ಕಿಸುವ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ಡೆಸ್ಕ್ ಟಾಪ್ ಸೇರಿದಂತೆ ಎಲ್ಲಾ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದು. ‘ಎಕ್ಸ್’ ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕಕ್ಕೆ ವೇದಿಕೆಯಾಗಲಿದೆ ಮತ್ತು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ‘ಎಕ್ಸ್’ ಪ್ರಸ್ತುತ ಉಚಿತ ಟ್ವೀಟ್ ಡೆಕ್ ಗಳನ್ನು ನೀಡುತ್ತಿದೆ. ಅವುಗಳನ್ನು ಪಾವತಿಸಿದ ಸೇವೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಎಲೋನ್ ಮಸ್ಕ್ ಬಹಿರಂಗಪಡಿಸಿದ್ದಾರೆ.

 

Related posts

ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಚಂದ್ರನಿಂದ ಮಣ್ಣಿನ ಮಾದರಿ ತರಲು ಇಸ್ರೋ ಪ್ಲಾನ್: ಮುಂದಿನ ಯೋಜನೆಗೆ ಸಿದ್ದತೆ.

ಬದಲಾವಣೆಗೆ ಗಡುವು ಮುಗಿದ್ರೂ 2000 ರೂ. ನೋಟು ನಿಮ್ಮಲ್ಲಿದೆಯೇ..? ಹಾಗಾದ್ರೆ ಹೀಗೆ ಮಾಡಿ…

ಮುಂದಿನ ಐದು ದಿನಗಳ ಕಾಲ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ..