ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಬೀದಿಬದಿ ಹಣ್ಣಿನ ವ್ಯಾಪಾರ ಮಾಡುತ್ತಲೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ತಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್.

ನವದೆಹಲಿ:  ತಂದೆ-ತಾಯಿಗಳು ತಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ಎಷ್ಟು ಶ್ರಮ ವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಾವು ಅನಕ್ಷರಸ್ಥರಾಗಿ ಬಡವರಾಗಿ ಅನುಭವಿಸಿದ ನೋವನ್ನ ತಮ್ಮ ಮಕ್ಕಳು ಅನುಭವಿಸಬಾರದು ಎಂದು ತಮ್ಮ ಮಕ್ಕಳಿಗೆ ಶಿಕ್ಷಣವನ್ನ ಕೊಡುತ್ತಾರೆ. ಈ ಮಧ್ಯೆ  ಇಲ್ಲೋರ್ವ ಬಡ ಮಹಿಳೆ ಬೀದಿಬದಿ ಹಣ್ಣಿನ ವ್ಯಾಪಾರ ಮಾಡುತ್ತಲೇ ಪಕ್ಕದಲ್ಲಿಯೇ ತನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಡ ಮಹಿಳೆ ರಸ್ತೆಬದಿ ಹಣ್ಣಿನ ವ್ಯಾಪಾರ ಮಾಡುತ್ತ ತಳ್ಳುಗಾಡಿ ಪಕ್ಕದಲ್ಲಿಯೇ ಚಾಪೆ ಹಾಸಿ ತನ್ನ ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಬಡತನದ ಮಧ್ಯೆಯೂ ತನ್ನ ಮಕ್ಕಳು ಚನ್ನಾಗಿ ಓದಬೇಕು ಎಂಬ ಕಾಳಜಿ. ಮಕ್ಕಳ ಭವಿಷ್ಯಕ್ಕಾಗಿ ಆಕೆ ವಹಿಸುತ್ತಿರುವ ಮುತುವರ್ಜಿ  ಶ್ರಮ ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಲ 28 ಸೆಕೆಂಡ್ ಗಳ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಹೃದಯಸ್ಪರ್ಶಿಯಾಗಿರುವ ಈ ದೃಶ್ಯಕ್ಕೆ ಬರೆಯಲು ಪದಗಳೇ ಇಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದರೆ ಅನೇಕರು ಮಹಿಳೆಯ ಕಾರ್ಯಕ್ಕೆ ಸೆಲ್ಯೂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

 

Related posts

ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ  ದಾಳಿ : ದಾಖಲೆ ಪರಿಶೀಲನೆ.

ಕಾವ್ಯ ಕೇಡು ಸೇಡುಗಳಿಂದ ಮುಕ್ತವಾದುದು-ಕವಯಿತ್ರಿ ಸವಿತಾ ನಾಗಭೂಷಣ

ನಾನು ಕೊಟ್ಟ ಜಾತಿಗಣತಿ ವರದಿ ನೈಜ ಮತ್ತು ವೈಜ್ಞಾನಿಕ- ಕಾಂತರಾಜು ಸ್ಪಷ್ಟನೆ