ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳು

ವಕೀಲರ ಮುಂದೆ ನಡೆಯುವ ವಿವಾಹಕ್ಕೂ ಮನ್ನಣೆ- ಸುಪ್ರೀಂಕೋರ್ಟ್

ನವದೆಹಲಿ: ವಕೀಲರ ಮುಂದೆಯೂ ನಡೆಯುವ ವಿವಾಹಕ್ಕೂ ಮನ್ನಣೆ ಸಿಗಲಿದೆ ಎಂದು  ಸುಪ್ರೀಂಕೋರ್ಟ್  ಅಭಿಪ್ರಾಯ ವ್ಯಕ್ತಪಡಿಸಿದೆ.

ವಕೀಲರ ಕೊಠಡಿಯಲ್ಲಿಯೇ ಗಂಡು ಮತ್ತು ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಅಥವಾ ಬೆರಳಿಗೆ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯಾಗಬಹುದು. ಇದಕ್ಕೂ ಹಿಂದೂ ವಿವಾಹ ಕಾಯ್ದೆಯಡಿ ಮನ್ನಣೆ ಸಿಗಲಿದೆ ಎಂದು ಸುಪ್ರೀಂ ಕೋರ್ಟ್, ಪ್ರತಿಪಾದಿಸಿದೆ.

ಅಪರಿಚಿತರ ಸಮ್ಮುಖದಲ್ಲಿ ರಹಸ್ಯವಾಗಿ ನಡೆಯುವ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಮತ್ತು 7(ಎ) ಅಡಿ ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತು.

ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಹಾಗೂ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವುದಕ್ಕಷ್ಟೇ ವಕೀಲರ ಸಾಮರ್ಥ್ಯ ಸೀಮಿತಗೊಂಡಿಲ್ಲ. ಸ್ನೇಹಿತ, ಸಂಬಂಧಿ ಹಾಗೂ ಸಾಮಾಜಿಕ ಕಾರ್ಯಕರ್ತನ ಸ್ಥಾನದಲ್ಲಿ ನಿಂತುಕೊಂಡು ಮದುವೆ ಮಾಡಿಸಬಹುದು ಎಂದು ಕಾಯ್ದೆಯ ಸೆಕ್ಷನ್ 7(ಎ) ಅಡಿ ಸ್ಪಷ್ಟಪಡಿಸಲಾಗಿದೆ (ತಮಿಳುನಾಡು ಸರ್ಕಾರದ ತಿದ್ದುಪಡಿ ಕಾಯ್ದೆ) ಎಂದು ಹೇಳಿತು.

ಸಂಬಂಧಿಕರು, ಸ್ನೇಹಿತರು ಅಥವಾ ಇತರೆ ವ್ಯಕ್ತಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುವ ಮದುವೆಗೆ ಸೆಕ್ಷನ್ 7(ಎ) ಅನ್ವಯಿಸುತ್ತದೆ. ಅರ್ಚಕರ ಉಪಸ್ಥಿತಿ ಇಲ್ಲದೆಯೇ ನಡೆಯುವ ವಿವಾಹಕ್ಕೂ ಕಾನೂನಿನ ಮನ್ನಣೆ ನೀಡುವುದಕ್ಕೆ ಈ ಸೆಕ್ಷನ್ ಅವಕಾಶ ಕಲ್ಪಿಸಲಿದೆ’ ಎಂದು ಹೇಳಿತು.

 

Related posts

ಅಡಿಕೆಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ದೊರತರೆ ಮೌಲ್ಯ ಹೆಚ್ಚುತ್ತದೆ-ಗೋಪಿನಾಥ್

 ನ.27 ರಂದು ಶಿರಾಳಕೊಪ್ಪ ಬಸವೇಶ್ವರ ಸಹಕಾರ ಬ್ಯಾಂಕ್ ನ 111ನೇ ವಾರ್ಷಿಕೋತ್ಸವ

ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ನಾಲ್ವರು ಸಚಿವರಿಂದ ವಿರೋಧ: ಹೈಕಮಾಂಡ್ ಗೆ ಪತ್ರ