ಕನ್ನಡಿಗರ ಪ್ರಜಾನುಡಿ
ದೇಶಪ್ರಧಾನ ಸುದ್ದಿಮುಖ್ಯಾಂಶಗಳುರಾಜಕೀಯರಾಜ್ಯ

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಿ- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ.

ನವದೆಹಲಿ: ನಿನ್ನೆಯ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಹೇಳಿದಷ್ಟೇ ನೀರನ್ನ ತಮಿಳುನಾಡಿಗೆ  ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.

ಇಂದು ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ಸಭೆಯಲ್ಲಿ  ತೀರ್ಮಾನಿಸಿದೆ.

ತಮಿಳುನಾಡು ಸರ್ಕಾರ ಪ್ರತಿನಿತ್ಯ 7500 ಕ್ಯೂಸೆಕ್ ನೀರು ಬಿಡುಗಡೆಗೆ ಸಭೆಯಲ್ಲಿ ಮನವಿ ಮಾಡಿತು. ಆದರೆ ಕರ್ನಾಟಕ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿ  3ಸಾವಿರ ಕ್ಯೂಸೆಕ್ ಅಷ್ಟೇ ನೀರು ಹರಿಸುವುದಾಗಿ ವಾದಿಸಿತು.

ಆದರೆ ಕರ್ನಾಟಕ ಸರ್ಕಾರದ ವಾದ ಒಪ್ಪದ ಪ್ರಾಧಿಕಾರ  ನಿನ್ನೆಯ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಹೇಳಿದಷ್ಟೇ ನೀರು ಬಿಡುಗಡೆಗೆ ಆದೇಶಿಸಿದೆ.

Related posts

ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು-ವೈ.ಹೆಚ್. ನಾಗರಾಜ್

33 ನೇ ರಾಜ್ಯ ಮಟ್ಟದ ಸಂಸ್ಕತ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ.

ಇಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ  ಘೋಷಣೆ.